×
Ad

'ಉಡುಪಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್’ ಪದಾಧಿಕಾರಿಗಳ ಆಯ್ಕೆ

Update: 2021-07-16 17:56 IST

ಉಡುಪಿ, ಜು.16: ಉಡುಪಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ವಾರ್ಷಿಕ ಮಹಾ ಸಭೆಯು ಹಯಾತುಲ್ ಇಸ್ಲಾಂ ಮದ್ರಸಾ ಪಲಿಮಾರು ಇದರ ಆಶ್ರಯದಲ್ಲಿ ನಡೆಯಿತು.

ಮುಪತ್ತೀಷ್ ಖಾಸಿಂ ಮುಸ್ಲಿಯಾರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2021-22ರ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಫಾರೂಖ್ ಹನೀಫಿ ನಿಟ್ಟೆ, ಉಪಾಧ್ಯಕ್ಷರಾಗಿ ರಿಯಾಝ್ ಫೈಝಿ ಮಲಾರ್ ಹಾಗೂ ಉಸ್ಮಾನ್ ಮುಸ್ಲಿಯಾರ್ ರೆಂಜಾಳ, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಫೈಝಿ ರೆಂಜಾಳ, ಜೊತೆ ಕಾರ್ಯದರ್ಶಿಯಾಗಿ ರಂಝೀಲ್ ಕೌಸರಿ ಪಣಿಯೂರು ಹಾಗೂ ನಿಝಾಮುದ್ದೀನ್ ಬಾಖವಿ ಬೈಲೂರು, ಕೋಶಾಧಿಕಾರಿ ಅಬ್ದುಲ್ ರಝಾಕ್ ಮಡ್ಮನ್, ಪರೀಕ್ಷೆ ಬೋರ್ಡ್ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಫೈಝಿ ಎರ್ಮಾಲ್ ಮತ್ತು ಉಪಾಧ್ಯಕ್ಷರಾಗಿ ಇಸ್ಹಾಕ್ ಅಝ್ಹರಿ ಎರ್ಮಾಲ್, ಜಿಲ್ಲಾ ಕೌನ್ಸಿಲರಾಗಿ ಹಂಝ ಫೈಝಿ ತೋಡಾರು ಅವರನ್ನು ಆಯ್ಕೆ ಮಾಡಲಾಯಿತು.

ಇದೇ ವೇಳೆ ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಮುಸ್ಲಿಯಾರ್  ಪಲಿಮಾರ್,  ಸಂಚಾಲಕರಾಗಿ ಅಬ್ದುರ್ರಶೀದ್ ಅಝ್ಹರಿ ಪಣಿಯೂರು,  ಐ.ಟಿ.ಸಂಯೋಜಕರಾಗಿ ನಿಝಾಮುದ್ದೀನ್ ಬಾಖವಿ ಬೈಲೂರು ಇವನ್ನು ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News