×
Ad

ಸೌಕೂರು ಏತ ನೀರಾವರಿ ಯೋಜನೆ: ಸಿಪಿಎಂ ನಿಯೋಗದಿಂದ ಇಂಜಿನಿಯರ್ ಭೇಟಿ

Update: 2021-07-16 18:04 IST

ಕುಂದಾಪುರ, ಜು.16: ಸರಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಸೌಕೂರು ಏತ ನೀರಾವರಿ ಯೋಜನೆಯ ಕಾಮಗಾರಿಗಳಿಂದಾಗುತ್ತಿ ರುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಹಾಗು ನೀರಾವರಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಸಿಪಿಎಂ ಬೈಂದೂರು ವಲಯ ಸಮಿತಿ ಇತ್ತೀಚೆಗೆ ಯೋಜನೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಭೇಟಿ ಮಾಡಿತು.

ಮಾವಿನಕಟ್ಟೆಯ ಶಾಲಾ ವಠಾರದ ಬಳಿ ನಿರ್ಮಿಸುತ್ತಿರುವ ಟ್ಯಾಂಕ್ ಶಾಲೆಯ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ನಿರ್ಮಿಸಲು ಹಾಗು ರಸ್ತೆಯ ಬದಿಯ ಚರಂಡಿಗಳನ್ನು ದುರಸ್ತಿಗೊಳಿಸಲು ಚರಂಡಿಯೊಳಗೆ ಅಳವಡಿಸಿರುವ ವಿದ್ಯುತ್ ಕಂಬಗಳ ತೆರವುಗೊಳಿಸಲು ಹಾಗು ಯೋಜನೆಯ ಕಾಮಗಾರಿಯಿಂದ ಹಾಳಾದ ಗ್ರಾಮಸ್ಥರ ಕುಡಿಯುವ ನೀರಿನ ಬಾವಿ ಬಗ್ಗೆ ಗಮನ ಸೆಳೆಯಲಾಯಿತು. ಮಾವಿನಕಟ್ಟೆ ಶಾಲೆಯ ಅಭಿವೃದ್ಧಿಗೆ ಸಹಾಯ ಮಾಡಲು ಸೇರಿದಂತೆ ಹಲ ವಾರು ಸಮಸ್ಯೆಗಳನ್ನು ಇಂಜಿನಿಯರ್ ಗಮನಕ್ಕೆ ತಂದು ಒತ್ತಾಯಿಸಲಾಯಿತು.

ಮನವಿಯನ್ನು ಸ್ವೀಕರಿಸಿದ ಇಂಜಿನಿಯರ್, ಸಮಸ್ಯೆಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸ್ಥಳೀಯ ಮುಖಂಡರಾದ ಜಿ.ಡಿ.ಪಂಜು ಪೂಜಾರಿ, ಜಮಾಲ್ ಕುದ್ರುಮಕ್ಕಿ ಗುಲ್ವಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News