ಕಾರ್ಕಳ : ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಗ್ರಹಣ

Update: 2021-07-16 14:38 GMT

ಕಾರ್ಕಳ :ಬ್ಲಾಕ್ ಮಹಿಳಾ ಕಾಂಗ್ರೆಸ್ ಕಾರ್ಕಳ ಇದರ ನೂತನವಾಗಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅನಿತಾ ಡಿಸೋಜಾರವರ ಪದಗ್ರಹಣ ಸಮಾರಂಭವು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ನಿಕಟಪೂರ್ವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ನಳಿನಾಕ್ಷಿ ಆಚಾರ್ಯರವರು   ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ತನಗೆ ಸಹಕಾರ ನೀಡಿದ ಮಾಜಿ ಶಾಸಕ ಗೋಪಾಲ ಭಂಡಾರಿಯವರಿಗೆ ಹಾಗೂ ನನ್ನೊಂದಿಗೆ ಸಹಕರಿಸಿದ ಪಕ್ಷದ ವಿವಿಧ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿ ಗಳಿಗೆ ಹಾಗು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. 

ಅಧಿಕಾರ ಸ್ವೀಕರಿಸಿ ಮಾತನಾಡಿದ ಅನಿತಾ ಫ್ರಾನ್ಸಿಸ್ ರವರು ಪಕ್ಷದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕಾರ್ಯಕರ್ತರ ಸಹಕಾರ ಪಡೆದು ಪಕ್ಷವನ್ನು ಕಟ್ಟಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗರವರು ಮಾತನಾಡಿ ಮಹಿಳಾ ಕಾಂಗ್ರೆಸ್ ಸಂಘಟನೆಯನ್ನು ಪ್ರತೀ ಬೂತ್ ಮಟ್ಟದಲ್ಲಿ ಇನ್ನಷ್ಟು ಬಲಿಷ್ಠವಾಗಿ ನಾವೆಲ್ಲ ಒಂದಾಗಿ ಸಂಘಟಿಸೋಣ ಎಂದರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಕೋಟ್ಯಾನ್ ಮಾತನಾಡಿ ಮಹಿಳೆಯರು ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಹೇಗೆ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ವಿವರಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಾಲಿನಿ ರೈ ಮಹಿಳಾ ಕಾಂಗ್ರೆಸ್ ಕಟ್ಟುವಲ್ಲಿ ತನ್ನ ಅನುಭವ ಹಾಗೂ ಇನ್ನು ಮುಂದೆ ಹೇಗೆ ನಾವು ಸಂಘಟಿತರಾಗಬೇಕು ಎಂದು ಹೇಳಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅನಿತಾ ಡಿಸೋಜರವರಿಗೆ ಶುಭಹಾರೈಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಮ್ರತ್ ಶೆಣೈರವರು ಪಕ್ಷ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಮತ್ತು ಮಹಿಳೆಯರಿಗೆ ಪಕ್ಷ ಕೊಟ್ಟ ಸನ್ಮಾನದ ಬಗ್ಗೆ ವಿವರಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ ಬಿಜೆಪಿಯ ಆಡಳಿತ ವೈಫಲ್ಯ ಜನರಿಗೆ ಈಗ ಮನದಟ್ಟಾಗುತ್ತಿತ್ತು ಬೀಡಿ ಕಾರ್ಮಿಕ ಮಹಿಳೆಯರು ಸಂಕಷ್ಟ ಮತ್ತು ಬೆಲೆ ಏರಿಕೆಯಿಂದ ರೋಸಿಹೋಗಿರುವ ಸಮಯವನ್ನು ನಮ್ಮ ಪಕ್ಷಕ್ಕೆ ಅನುಕೂಲಕರವಾಗಿ ಬಳಸಿ ಕೊಂಡು ಪಕ್ಷವನ್ನು ಹೇಗೆ ಸಂಘಟನೆ ಮಾಡಬಹುದು ಎಂದು ವಿವರಿಸಿದರು.

ಸೇವಾದಳದ ಅಧ್ಯಕ್ಷ ಸುಶಾನ್ ಸುಧಾಕರ್ ಮಾತನಾಡಿ ಸ್ವತಂತ್ರ ಭಾರತದ ಪ್ರಥಮ ಮುಖ್ಯಮಂತ್ರಿ ಸಚೇತ ಕೃಪಲಾನಿ ಹಾಗು ಸ್ವತಂತ್ರ ಭಾರತದ ಪ್ರಥಮ ರಾಜ್ಯಪಾಲ ಸರೋಜಿನಿ ನಾಯ್ಡು ಪ್ರಥಮ ಪ್ರಧಾನಿ ಇಂದಿರಾ ಗಾಂಧಿಯಂತ ಮಹಾನ್ ಮಹಿಳಾ ನಾಯಕಿಯರನ್ನು ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಸಮಾರಂಭದ ಅಧ್ಯಕ್ಷೆ ಗೀತಾ ವಾಗ್ಲೆ ಅವರು ಮಾತನಾಡಿ ಪಕ್ಷ ನನಗೆ ಕೊಟ್ಟ ಅವಕಾಶಗಳು ಹಾಗೂ ನೂತನವಾಗಿ ಆಯ್ಕೆಯಾದ ಅನಿತಾ ಡಿಸೋಜಾರವರು ತನಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಕೆಪಿಸಿಸಿ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಪುರಸಭಾ ಸದಸ್ಯರು ಸದಸ್ಯೆಯರು ಪುರಸಭಾ ಮಾಜಿ ಸದಸ್ಯರು ಸದಸ್ಯೆಯರು ಪಂಚಾಯತ್ ಸದ ಸ್ಯರು ಸದಸ್ಯೆಯರು ಮಾಜಿ ಪಂಚಾಯತ್ ಸದಸ್ಯರು ಸದಸ್ಯೆಯರು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ರೀನಾ ಟೀಚರ್ ಸ್ವಾಗತಿಸಿ, ಜಯಲಕ್ಷ್ಮಿ ಶೆಟ್ಟಿ ವಂದಿಸಿದರು. ಶೋಭಾ ಅಂಬಾಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News