×
Ad

ವೈಟ್ ಬೋರ್ಡ್ ವಾಹನ ಬಾಡಿಗೆಗೆ ಬಳಸಿದರೆ ಮುಟ್ಟುಗೋಲು: ಉಡುಪಿ ಆರ್‌ಟಿಓ

Update: 2021-07-16 20:42 IST

ಉಡುಪಿ: ಖಾಸಗಿ ವಾಹನಗಳಾದ(ವೈಟ್ ಬೋರ್ಡ್) ಲಘು ಮೋಟಾರು ವಾಹನ, ಓಮ್ನಿ, ಬಸ್ ಯಾವುದೇ ನಿಟ್ಟಿನಲ್ಲಿ ಬಾಡಿಗೆಗೆ ಓಡಿಸ ಬಾರದು. ಒಂದು ವೇಳೆ ಬಾಡಿಗೆ ನಿಮಿತ್ತ ಸಾರ್ವಜನಿಕರನ್ನು ಕೊಂಡೊಯ್ಯುವುದು ಕಂಡುಬಂದರೆ ಆ ವಾಹನಗಳನ್ನು ಮುಟ್ಟುಗೋಲು ಹಾಕಿಕೊ ಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನಗಳನ್ನು ಸ್ಥಳದಲ್ಲೇ ಮುಟ್ಟುಗೋಲು ಹಾಕಿ ಕಾನೂನು ರೀತಿಯಲ್ಲಿ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ತೆಗೆದು ಕೊಳ್ಳಲಾಗುವುದಾಗಿ ಖಾಸಗಿ ವಾಹನ ಮಾಲಕರಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಮುಂದಿನ ಕ್ರಮಕ್ಕೆ ಹೊಣೆಯಾಗಲಿದ್ದಾರೆ ಎಂದು ಅವು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ ಹೈಕೋರ್ಟ್ ಆದೇಶದಂತೆ ಎಲ್ಲಾ ಭಾರಿ ಸರಕು ಸಾಗಾಣಿಕೆ ವಾಹನಗಳಿಗೆ ಕಟ್ಟುನಿಟ್ಟಿನ ತಪಾಸಣಾ ಕಾರ್ಯಕ್ಕೆ ಅನುಕೂಲ ಕಲ್ಪಿಸಿದ್ದು, ವಾಹನದ ಹೇರುಭಾರದ ಮಿತಿಯನ್ನು ಮೀರದಂತೆ ವಾಹನಗಳನ್ನು ಓಡಿಸಬೇಕು. ಮುಂದಿನ ದಿನಗಳಲ್ಲಿ ಅಧಿಕ ಭಾರ ಹೊತ್ತ ವಾಹನಗಳನ್ನು ನ್ಯಾಯಾಲಯದ ಮೂಲಕ ಮಾತ್ರವೇ ಬಿಡುಗಡೆಗೊಳಿಸಬೇಕಾದ ಸಂದರ್ಭ ಬರಬಹುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News