ಮಲಾರ್: ಮಾಹಿತಿ ಮತ್ತು ಸೇವಾ ಕೇಂದ್ರ ಉದ್ಘಾಟನೆ

Update: 2021-07-16 16:57 GMT

ಕೊಣಾಜೆ, ಜು.16: ಜನರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಸರಕಾರದ್ದಾಗಿದ್ದರೂ ಕೂಡ ಆ ಕೆಲಸವಾಗದ ಕಾರಣ ಪಕ್ಷವು ಸೇವಾ ಕೇಂದ್ರ ಆರಂಭಿಸಿದೆ. ಧಾರ್ಮಿಕ ಕೇಂದ್ರಗಳ ಬಳಿಕ ಎರಡನೇ ಆದ್ಯತೆ ಸೇವಾ ಕೇಂದ್ರಕ್ಕೆ ಪಕ್ಷ ನೀಡಲಾಗುತ್ತಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದರು.

ಎಸ್‌ಡಿಪಿಐ ಪಾವೂರು ಗ್ರಾಮ ಸಮಿತಿಯ ವತಿಯಿಂದ ಪಾವೂರು ಗ್ರಾಪಂ ಬಳಿಯ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾದ ಮಾಹಿತಿ ಮತ್ತು ಸೇವಾ ಕೇಂದ್ರ ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

 ಎಸ್‌ಡಿಪಿಐ ಪಾವೂರು ಗ್ರಾಮ ಸಮಿತಿಯ ಅಧ್ಯಕ್ಷ ಎಂ.ಕೆ.ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷ ಇಕ್ಬಾಲ್, ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಲತೀಫ್ ಕೋಡಿಜಾಲ್, ಎಸ್‌ಡಿಟಿಯು ಕ್ಷೇತ್ರಾಧ್ಯಕ್ಷ ಇರ್ಷಾದ್ ಅಬೂಬಕ್ಕರ್, ಪಾವೂರು ಗ್ರಾಪಂ ಅಧ್ಯಕ್ಷೆ ಖಮರುನ್ನಿಸಾ, ಮುಹಮ್ಮದ್ ಅನ್ಸಾರ್, ಸದಸ್ಯರಾದ ಇಕ್ಬಾಲ್ ಇನೋಳಿ, ರಿಝ್ವಾನ್ ಮಲಾರ್, ಮೆಹರುನ್ನಿಸಾ ಬಶೀರ್,ವಲೇರಿಯನ್ ಡಿಸೋಜ, ಖತೀಜಾ ಲತೀಫ್, ಮಾಜಿ ಸದಸ್ಯರಾದ ನಾಸೀರ್ ಮಲಾರ್, ಮುಹಮ್ಮದ್ ಬದ್ರಿಯಾ ನಗರ, ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಶರೀಫ್, ಅಕ್ರಂ ಹಸನ್, ಸಿರಾಜುದ್ದೀನ್ ಅರ್ಖಾನ, ಹೈದರ್ ಅಡ್ಕರೆಪಡ್ಪು ಉಪಸ್ಥಿತರಿದ್ದರು.

ಸಮದ್ ಮುಕ್ರಿ ಇನೋಳಿ ದುಆ ನೆರವೇರಿಸಿದರು. ಸಮೀರ್ ಟಿಪ್ಪುನಗರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News