×
Ad

ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಉಳ್ಳಾಲ ಸಮಿತಿ ರಚನಾ ಸಭೆ

Update: 2021-07-16 22:36 IST

ಮಂಗಳೂರು, ಜು.16: ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಉಳ್ಳಾಲ ವಲಯ ಸಮಿತಿ ರಚನಾ ಸಭೆಯು ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಶುಕ್ರವಾರ ಜರಗಿತು.

ಸಂಘದ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀದಿ ವ್ಯಾಪಾರಿಗಳ ನಿರಂತರ ಹೋರಾಟದ ಫಲವಾಗಿ ಬೀದಿ ವ್ಯಾಪಾರಸ್ಥರೂ ಘನತೆಯ ಬದುಕು ನಡೆಸಲು ಅನುಕೂಲವಾದಂತಹ ಕಾನೂನು ಜಾರಿಗೆ ಬಂದಿದೆ. ಅಧಿಕಾರಿ ಗಳು ಕಾನೂನನ್ನು ಅಧ್ಯಯನ ಮಾಡಿ ಬೀದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಉಳ್ಳಾಲ ದರ್ಗಾ ಸಮಿತಿಯ ಉಪಾಧ್ಯಕ್ಷ ಬಾವ ಮುಹಮ್ಮದ್, ಉದ್ಯಮಿ ಚಂದ್ರಕಾಂತ್, ಸಂಘದ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮುಹಮ್ಮದ್ ಆಸಿಫ್, ನೌಷಾದ್ ತಲಪಾಡಿ ಉಪಸ್ಥಿತರಿದ್ದರು. ರಿಯಾಝ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಅಬೂಬಕ್ಕರ್ ಸ್ವಾಗತಿಸಿ, ಮನ್ಸೂರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News