ಎಟಿಎಂ ಕೇಂದ್ರದಲ್ಲಿ ವಂಚನೆ: ದೂರು

Update: 2021-07-16 17:17 GMT

ಪಡುಬಿದ್ರಿ: ಎಟಿಎಂ ಕೇಂದ್ರದಲ್ಲಿ ಎಟಿಎಂ ನಗದು ಮಾಡಲು ತಿಳಿಯದೆ ಅಲ್ಲಿದ್ದ ಅಪರಿಚಿತ ವ್ಯಕ್ತಿಗೆ ಹೇಳಿದಾಗ ಆತ ಹಣ ಡ್ರಾ ಮಾಡಿ ವಂಚನೆ ನಡೆಸಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿಯ ಅಬ್ಬೇಡಿ ನಿವಾಸಿ ವಿಜಯ ಎಂಬವರು ಜುಲೈ 13ರಂದು ಎಸ್‍ಬಿಐ ಬ್ಯಾಂಕಿನ ಕೆಳಗಡೆ ಇರುವ ಎಟಿಎಂ ಕೇಂದ್ರಕ್ಕೆ ತೆಳಿದ್ದರು. ಅಲ್ಲಿ ಸಕ್ಯೂರಿಟಿ ಗಾರ್ಡ್ ಇರಲಿಲ್ಲ. ಹಣ ನಗದು ಮಾಡಲು ತಿಳಿಯದೆ ಎಟಿಎಂ ಕೇಂದ್ರದ ಒಳಗೆ ಸುಮಾರು 40-45 ವರ್ಷದ ವ್ಯಕ್ತಿಯಲ್ಲಿ ತನಗೆ ಹಣ ತೆಗೆಯಲು ಗೊತ್ತಿಲ್ಲ ಸಹಾಯ ಮಾಡಿ ಎಂದು ಕೇಳಿದ್ದರು. ಆ ವ್ಯಕ್ತಿ ಎಟಿಎಮ್ ಕಾರ್ಡ್ ಪಡೆದು, ಕಾರ್ಡ್‍ನ್ನು ಎಟಿಎಮ್ ಮೆಶೀನ್‍ಗೆ ಹಾಕಿ ಪಿನ್ ನಂಬ್ರ ಹಾಕಲು ಹೇಳಿ,  ಬ್ಯಾಲೆನ್ಸ್ ಚೆಕ್ ಮಾಡಿದ್ದರು. ಬಳಿಕ ಈ ಎಟಿಎಮ್‍ನಲ್ಲಿ ಹಣ ಇಲ್ಲ ಎಂದು ಹೇಳಿ ವಿಜಯ್ ಅವರಿಗೆ ಕಾರ್ಡನ್ನು ನೀಡಿದ್ದರು.

ಕಾರ್ಡನ್ನು ಗಮನಿಸದೇ ತಮ್ಮ ಜೇಬಿಗೆ ಹಾಕಿಕೊಂಡು, ಸ್ವಲ್ಪ ಸಮಯದ ನಂತರ ಎಸ್‍ಬಿಐ ಎಟಿಎಮ್ ಬಳಿಗೆ ಬಂದು ಸೆಕ್ಯೂರಿಟಿ ಗಾರ್ಡ್ ಬಳಿ 10ಸಾವಿರ ರೂ.  ನಗದು ಮಾಡಿ ಕೊಡುವಂತೆ ಎಟಿಎಮ್ ಕಾರ್ಡನ್ನು ನೀಡಿದರು. ಈ ವೇಳೆ ಅಪರಿಚಿತ ವ್ಯಕ್ತಿ ಬೇರೆ ಕಾರ್ಡ್ ನೀಡಿದ್ದರುವುದು ಬೆಳಕಿಗೆ ಬಂತು. ಕೂಡಲೇ ಹಣ ಡ್ರಾ ಮಾಡಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಹೋದಾಗ ಅವರ ಅಕೌಂಟ್‍ನಿಂದ ದುರ್ಗಾ ಜ್ಯುವೆಲ್ಲರಿಯಲ್ಲಿ 25 ಸಾವಿರ ರೂ. ಮೌಲ್ಯದ  ಚಿನ್ನದ ನಾಣ್ಯವನ್ನು ಖರೀದಿಸಿದ್ದು, ಬಳಿಕ ಎಟಿಎಂನಲ್ಲಿ 10 ಸಾವಿರ ರೂ. ನಂತ ಎರಡು ಬಾರಿ ಹಣವನ್ನು ನಗದು ಮಾಡಿದ್ದು, ಈ ಬಗ್ಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News