ಗಾಂಜಾ ಸೇವನೆ: ಮೂವರು ಪೊಲೀಸ್ ವಶಕ್ಕೆ
Update: 2021-07-17 18:10 IST
ಕಾಪು, ಜು.17: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜು.15ರಂದು ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾಂಗಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಸಮೀಪ ಪಾಂಗಾಳ ವಿದ್ಯಾವರ್ಧಕ ಹೈಸ್ಕೂಲ್ ಬಳಿಯ ನಿವಾಸಿ ಅನಿಕೇತ್(26) ಹಾಗೂ ಕೊಪ್ಪಲಂಗಡಿ ಕೆ1 ಹೋಟೆಲ್ ಬಳಿ ಕೊಪ್ಪಲಂಗಡಿ ವಿದ್ಯಾನಿಕೇತನ ಶಾಲೆಯ ಬಳಿಯ ನಿವಾಸಿ ಸೌರಭ್(27) ಹಾಗೂ ಕಟಪಾಡಿ ಕೋಟೆ ಗ್ರಾಮದ ಪಳ್ಳಿಗುಡ್ಡೆ ಎಂಬಲ್ಲಿ ಕೋಟೆ ನಿವಾಸಿ ಪ್ರವೀಣ್(26) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು, ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು ಇವರನ್ನು ಪರೀಕ್ಷಿಸಿದ ವೈದ್ಯರು ಇವರಿಬ್ಬರು ಗಾಂಜಾ ಸೇವನೆ ಮಾಡಿ ರುವುದಾಗಿ ಜು.16ರಂದು ದೃಢ ಪತ್ರ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.