×
Ad

ವೀರಮಂಗಲ: ರೈಲು ಸಂಚರಿಸುತ್ತಿದ್ದ ವೇಳೆ ಹಳಿಗೆ ದರೆ ಕುಸಿತ: ಸಂಚಾರ ಸ್ಥಗಿತ

Update: 2021-07-18 11:37 IST

ಪುತ್ತೂರು, ಜು.18: ರೈಲು ಸಂಚರಿಸುತ್ತಿದ್ದಂತೆಯೇ ದರೆ ಕುಸಿದು ಮಣ್ಣು ಹಳಿ ಮೇಲೆ ಬಿದ್ದ ಘಟನೆ ಪುತ್ತೂರು-ಕಬಕ-ಸುಬ್ರಹ್ಮಣ್ಯ ರೈಲ್ವೆ ಹಳಿಯ ನಡುವೆ ವೀರಮಂಗಲ ಎಂಬಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಪ್ರಯಾಣಿಕರ ಲೋಕಲ್ ರೈಲು ಈ ಹಳಿಯಲ್ಲಿ ಸಂಚರಿಸುತ್ತಿದ್ದ ವೇಳೆ ವೀರಮಂಗಲ ಗಡಿಪಿಲಿ ಎಂಬಲ್ಲಿ ಏಕಾಏಕಿ ಪಕ್ಕದ ದರೆ ಕುಸಿದಿದೆ. ಇದರಿಂದ ಮಣ್ಣು ರೈಲಿನ ಮುಂಭಾಗಕ್ಕೆ ಬಿದ್ದಿದ್ದು, ರೈಲಿನ ಗಾರ್ಡ್ ಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಆಗಮಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News