ಕಾಪು ತಾಲೂಕಿನಾದ್ಯಂತ ಭಾರೀ ಮಳೆ: ಹಲವು ಮನೆಗಳು ಜಲಾವೃತ
Update: 2021-07-18 14:13 IST
ಕಾಪು, ಜು.18: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳೆಲ್ಲಾ ಜಲಾವೃತಗೊಂಡಿದ್ದು, ಹಲವು ಮನೆಗಳು ಜಲಾವೃತಗೊಂಡಿವೆ.
ಕಾಪು ತಾಲೂಕಿನ ಮಜೂರು, ಉಳಿಯಾರು,ಕರಂದಾಡಿ, ಮಲ್ಲಾರು ಸೇರದಂತೆ ಹಲವು ಕಡೆಗಳಲ್ಲಿ ಕೃತಕ ನೆರೆ ಭೀತಿ ಉಂಟಾಗಿದ್ದು ಹಲವು ಮನೆಗಳು ಜಲಾವೃತಗೊಂಡಿದ್ದು, ಮನೆಯವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸ್ಥಳಿಯಾಡಳಿತ ಸೂಚನೆ ನೀಡಿದೆ. ಸುರಕ್ಷಿತ ಸ್ಥಳಗಳಿಗೆ ವರ್ಗಾವಣೆ ಕಾರ್ಯದಲ್ಲಿ ಸ್ಥಳಿಯರು ಸಹಕಾರ ನೀಡುತ್ತಿದ್ದಾರೆ.