×
Ad

ಮಾಡೂರು: ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲಿನಲ್ಲಿ ಚಿತ್ರೀಕರಣ: ದೂರು

Update: 2021-07-18 14:37 IST

ಉಳ್ಳಾಲ, ಜು.18: ಯುವತಿಯೋರ್ವಳು ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಕಿಟಕಿಯಿಂದ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿ ಪರಾರಿಯಾದ ಘಟನೆ ಕೋಟೆಕಾರು ಮಾಡೂರು ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಕೋಟೆಕಾರು, ಮಾಡೂರಿನಲ್ಲಿ ಯುವತಿಯೊಬ್ಬಳು ಶನಿವಾರ ರಾತ್ರಿ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿದ್ದಳು. ಈ ವೇಳೆ ಕಿಟಕಿ ಬಳಿ ಮೊಬೈಲ್ ಫೋನ್ ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಯುವತಿ ಜೋರಾಗಿ ಚೀರಾಡಿದಾಗ ಆಕೆಯ ತಾಯಿ ಮನೆಯಿಂದ ಹೊರ ಬಂದು ನೋಡಿದಾಗ ಬಚ್ಚಲು ಮನೆಯ ಕಿಟಕಿ ಬಳಿ ಏರಲು ಬೆಂಚು ಇಟ್ಟಿದ್ದು ಕಂಡುಬಂದಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News