ಜಲಜೀವನ್ ಮಿಷನ್ ಯೋಜನೆಯಡಿ ಕಾಪು ಕ್ಷೇತ್ರಕ್ಕೆ 65.63 ಕೋಟಿ ರೂ. ಮಂಜೂರಾತಿ
ಕಾಪು, ಜು.18: ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ 2024ರ ವೇಳೆಗೆ ಕುಡಿಯುವ ನೀರು ತಲುಪಬೇಕೆಂಬ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಡಿ ಕಾಪು ವಿಧಾನಸಭಾ ಕ್ಷೇತ್ರಕ್ಕೆ 65.63 ಕೋಟಿ ರೂಪಾಯಿಗಳು ಮಂಜೂರಾತಿ ಲಭಿಸಿದೆ.
ಶಾಸಕ ಲಾಲಾಜಿ ಆರ್. ಮೆಂಡನ್ ಅವರ ವಿಶೇಷ ಮುತುವರ್ಜಿಯಿಂದ ಈ ಅನುದಾನ ಮಂಜೂರು ಆಗಿದ್ದು, ಶೀಘ್ರದಲ್ಲಿ ಯೋಜನೆಯಡಿ ಕ್ಷೇತ್ರದ 26 ಗ್ರಾಮ ಪಂಚಾಯತ್ ಗಳ ಪ್ರತಿ ಮನೆಗಳಿಗೂ ಕುಡಿಯುವ ನೀರು ತಲುಪುವ ನಿಟ್ಟಿನಲ್ಲಿ ಕಾಮಗಾರಿ ಅನುಷ್ಠಾನಗೊಳ್ಳಲಿದೆ ಎಂದು ಶಾಸಕರ ಕಚೇರಿಯ ಪ್ರಕಟನೆ ತಿಳಿಸಿದೆ.
ಅನುದಾನ ಹಂಚಿಕೆಯಾದ ಗ್ರಾಮ ಪಂಚಾಯತ್ ಗಳ ವಿವರ: ಉದ್ಯಾವರ 9 ಕೋಟಿ ರೂ., ಕಟಪಾಡಿ 8.94 ಕೋಟಿ ರೂ., ಮಣಿಪುರ 4.71 ಕೋಟಿ ರೂ., ಇನ್ನಂಜೆ 3.99 ಕೋಟಿ ರೂ., ಪೆರ್ಡೂರು 3.81 ಕೋಟಿ ರೂ., ಕುರ್ಕಾಲು 3.79 ಕೋಟಿ ರೂ., ಅಲೆವೂರು 3.52 ಕೋಟಿ ರೂ., ಬೈರಂಪಲ್ಲಿ 3.15 ಕೋಟಿ ರೂ., ಶಿರ್ವ 2.39 ಕೋಟಿ ರೂ., ಪಡುಬಿದ್ರೆ 2.29 ಕೋಟಿ ರೂ., ಮುದರಂಗಡಿ 2.15 ಕೋಟಿ ರೂ., ಬೆಳ್ಳೆ 2.6 ಕೋಟಿ ರೂ., ತೆಂಕ 1.53 ಕೋಟಿ ರೂ., ಎಲ್ಲೂರು 1.53 ಕೋಟಿ ರೂ., ಪಲಿಮಾರು 1.45 ಕೋಟಿ ರೂ., ಆತ್ರಾಡಿ 1.36 ಕೋಟಿ ರೂ., ಮಜೂರು 1.24 ಕೋಟಿ ರೂ., ಕುಕ್ಕೆಹಳ್ಳಿ 1.29 ಕೋಟಿ ರೂ., ಕುತ್ಯಾರು 1.18 ಕೋಟಿ ರೂ., ಬಡಗಬೆಟ್ಟು 1.15 ಕೋಟಿ ರೂ., ಕೋಟೆ 1.9 ಕೋಟಿ ರೂ., ಹೆಜಮಾಡಿ 91.28 ಲಕ್ಷ ರೂ., ಬೊಮ್ಮರಬೆಟ್ಟು 85.55 ಲಕ್ಷ ರೂ., ಬೆಳಪು 79 ಲಕ್ಷ ರೂ., ಬಡಾ 74.48 ಲಕ್ಷ ರೂ. ಹಾಗೂ ಕೊಡಿಬೆಟ್ಟು 67 ಲಕ್ಷ ರೂ., ಮಂಜೂರಾಗಿದೆ ಎಂದು ಪ್ರಕಟನೆ ತಿಳಿಸಿದೆ.