×
Ad

ಸಿನಿಮಾ ಮೂಲಕ ಕೃಷಿಯನ್ನು ಬೆಂಬಲಿಸಲು ಪ್ರಯತ್ನ: ನಟ ರಕ್ಷಿತ್ ಶೆಟ್ಟಿ

Update: 2021-07-18 17:43 IST

ಬ್ರಹ್ಮಾವರ, ಜು.18: ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿ ರುವ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಯೋಜನೆಗೆ ನಾನು ಬ್ರಾಂಡ್ ಅಂಬಾಸಿಡರ್ ಆಗಲು ಉತ್ಸುಕನಾಗಿದ್ದೇನೆ. ಸಿನಿಮಾ ಮೂಲಕ ಬೇಸಾಯಕ್ಕೆ ಬೆಂಬಲಿಸಲು ಪ್ರಯತ್ನ ಮಾಡುತ್ತೇನೆ. ಈ ಯೋಜನೆಗೆ ನನ್ನಿಂದಾಗುವ ಎಲ್ಲಾ ಸಹಾಯ ಮಾಡುತ್ತೇನೆ ಎಂದು ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ರವಿವಾರ ವಾರಂಬಳ್ಳಿ ಭಾಗದ ಬಿರ್ತಿ ಹೇಮಾ ಶೆಡ್ತಿ ಅವರ ಮನೆ ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಕರಾವಳಿ ಜನರ ಮುಖ್ಯ ಉದ್ದಿಮೆ ಕೃಷಿಯಾಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಬೇಸಾಯ ಆಗುತ್ತಿತ್ತು. ಕಳೆದ 10-15 ವರ್ಷಗಳಿಂದ ನಮ್ಮಲ್ಲಿ ಬೇಸಾಯ ಕಡಿಮೆಯಾಗುತ್ತಿದೆ. ಕರಾವಳಿಯಲ್ಲಿ ಬೇಸಾಯ ಕೃಷಿ ನಿಂತು ಬಿಡುತ್ತದೆಯೇ ಎಂಬ ಆತಂಕ ಎಲ್ಲರಲ್ಲಿ ಇತ್ತು. ಇದೀಗ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಯೋಜನೆಯಿಂದ ಊರು ಬಿಟ್ಟವರು ಮತ್ತೆ ಊರಿಗೆ ವಾಪಸಾಗುತ್ತಿದ್ದಾರೆ. ಯುವಕರು ಮತ್ತೆ ಕೃಷಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಮಾಡುವುದು ಕಷ್ಟ ಅಲ್ಲ ಎಂದರು.

ಈ ವೇಳೆ ನಟ ರಕ್ಷಿತ್ ಶೆಟ್ಟಿ ಕೆಸರು ಗದ್ದೆಗೆ ಇಳಿದು ಭತ್ತದ ನಾಟಿ ಮಾಡಿದರು. ಬಳಿಕ ತಮ್ಮ ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆಯಲು ಅಭಿಮಾನಿಗಳು ಮುಗಿ ಬೀಳುತ್ತಿರುವುದು ಕಂಡುಬಂತು. ಆಂದೋಲನದ ರೂವಾರಿ ಶಾಸಕ ರಘುಪತಿ ಭಟ್, ಆರ್ಗನೈಸೇಷನ್ ಡಿಸ್ಕಲೇನ್‌ನ ಜಾಗತಿಕ ಅಧ್ಯಕ್ಷ ವಿಜಯ್ ಕುಮಾರ್, ಮೈಸೂರು ಮರ್ಕೆಂಟೈಲ್ ಕಂ. ಲಿಮಿಟೆಡ್ ಅಧ್ಯಕ್ಷ ಎಚ್.ಎಸ್.ಶೆಟ್ಟಿ, ಉದ್ಯಮಿ ರಾಘವ್ ಎಂ.ಶೆಟ್ಟಿ ಭೂ ಮಾತೆಗೆ ಹಾಲನ್ನು ಅರ್ಪಿಸಿದರು.

ವಾರಂಬಳ್ಳಿ ಗ್ರಾಪಂ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಸದಾನಂದ ಪೂಜಾರಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಭುಜಂಗ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ಮಹೇಶ್ ಠಾಕೂರ್, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಬಿ. ಧನಂಜಯ್, ಹಿರಿಯ ಕ್ಷೇತ್ರಾಧಿಕಾರಿ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡದಲ್ಲೂ ಒಟಿಟಿಗೆ ಅವಕಾಶ: ರಕ್ಷಿತ್ ಶೆಟ್ಟಿ

ಕನ್ನಡದಲ್ಲೂ ಒಟಿಟಿ ಶುರುವಾಗಿದೆ. ಒಟಿಟಿಗೆ ಬೇರೆತರದ ಸಿನಿಮಾನೇ ಮಾಡಬೇಕು. ಮಲಯಾಳಂನಲ್ಲಿ ಎಂಬತ್ತರ ದಶಕದಿಂದಲೇ ಸಿನಿಮಾ ಮಾಡು ತ್ತಿದ್ದಾರೆ. ಹಾಗಾಗಿ ಮಲಯಾಳಂ ಇಂಡಸ್ಟ್ರಿಗೆ ಒಟಿಟಿ ವೇದಿಕೆ ಬಹಳ ಬೇಗ ಸಿಕ್ಕಿದೆ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡದಲ್ಲಿ ಆ ಥರದ ಸಿನಿಮಾ ಮಾಡುವ ಮೇಕರ್ಸ್ ಬರಬೇಕು ಇನ್ನು ಹತ್ತು ಹದಿನೈದು ಜನ ಫಿಲಂ ಮೇಕರ್ಸ್ ಬರಬೇಕು. ವರ್ಷಕ್ಕೆ ಹತ್ತು ಹದಿನೈದು ಒಟಿಟಿಯಲ್ಲಿ ಬರುವ ಸಿನಿಮಾ ಮಾಡಬೇಕು. ನಾವು ಕಮರ್ಷಿಯಲ್ ಸಿನಿಮಾ ಜಾಸ್ತಿ ಮಾಡುತ್ತಿ ದ್ದೇವೆ. ನಾವು ಕೂಡ ಒಟಿಟಿಯಲ್ಲಿ ಒಳ್ಳೆ ಪ್ಲಾಟ್ಫಾರ್ಮ್ ಸೃಷ್ಟಿ ಮಾಡಬಹುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News