ಜು.19ರಂದು ಶಿರ್ವ ಗ್ರಾಮ ಪಂಚಾಯತ್ ಗ್ರಾಮಸಭೆ: ಗ್ರಾಮಸ್ಥರಿಗೆ ಆನ್‌ಲೈನ್ ಮೂಲಕ ಭಾಗವಹಿಸಲು ಅವಕಾಶ

Update: 2021-07-18 12:15 GMT

ಶಿರ್ವ, ಜು.18: ಉಡುಪಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಎಂಬಂತೆ ಪಂಚಾಯತ್ ಗ್ರಾಮ ಸಭೆಯನ್ನು ಆನ್ಲೈನ್ ಮೂಲಕ ನೇರ ಪ್ರಸಾರ ಮಾಡಲು ಶಿರ್ವ ಗ್ರಾಪಂ ಮುಂದಾಗಿದೆ. ಇದರಿಂದ ದೇಶ ವಿದೇಶದಲ್ಲಿರುವ ಶಿರ್ವ ಗ್ರಾಮಸ್ಥರಿಗೆ ಗ್ರಾಮ ಸಭೆಯನ್ನು ವೀಕ್ಷಿಸುವ ಅವಕಾಶ ಮಾಡಿಕೊಡ ಲಾಗಿದೆ.

2021-22 ಸಾಲಿನ ಪ್ರಥಮ ಗ್ರಾಮ ಸಭೆಯು ಜು.19ರಂದು ಬೆಳಿಗ್ಗೆ 10.30ಕ್ಕೆ ಶಿರ್ವ ಸಾರ್ವಜನಿಕ ಗಣೆಶೋತ್ಸವ ವೇದಿಕೆಯ ಸಮೀಪದ ಮಹಿಳಾ ಸೌಧದಲ್ಲಿ ನಡೆಯಲಿದ್ದು, ಈ ಗ್ರಾಮ ಸಭೆಯಲ್ಲಿ ಭಾಗವಹಿಸಲು ಎಲ್ಲ ಗ್ರಾಮಸ್ಥರಿಗೆ ಆಮಂತ್ರಣವಿದೆ. ಸಂಪೂರ್ಣ ಸಭೆಯನ್ನು ತಮ್ಮ ಮನೆಗಳಿಂದಲೂ ವೀಕ್ಷಿಸುವ ಅವಕಾಶವನ್ನು ಪಂಚಾಯತ್ ಕಲ್ಪಿಸಿದೆ.

‘ನಮ್ಮ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲ ಗ್ರಾಮಸ್ಥರ ಸಲಹೆ ಸೂಚನೆ ಗಳು ಬಹಳ ಮುಖ್ಯವಾಗಿದೆ. ನಾವು ಮಾಡಿದ ವಿವಿಧ ಯೋಜನೆ ಗಳ ಮಾಹಿತಿ, ನಮ್ಮ ಗ್ರಾಮಸ್ಥರಿಗೆ ನೀಡುವುದು ನಮ್ಮ ಕರ್ತವ್ಯ. ಕೊರೊನಾ ಮಹಾಮಾರಿಯ ಭಯ ಹಾಗೂ ನಿರಂತರ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಬಹಳಷ್ಟು ಜನರು ಈ ಗ್ರಾಮ ಸಭೆಯಲ್ಲಿ ಸಭೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಆದ್ದರಿಂದ ಅವರಿಗೆ ತಮ್ಮ ಮನೆಯಲ್ಲೇ ಕೂತು ಗ್ರಾಮ ಸಭೆಯಲ್ಲಿ ಭಾಗವಹಿ ಸಲು ಅವಕಾಶ ಕಲ್ಪಿಸಿ ಕೊಡುವುದೇ ಈ ನೇರಪ್ರಸಾರದ ಉದ್ದೇಶವಾಗಿದೆ ಎಂದು ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್ ತಿಳಿಸಿದ್ದಾರೆ.

‘ಗ್ರಾಮಸಭೆಗೆ ಖುದ್ದು ಹಾಜರಾಗಲು ಇಚ್ಛಿಸುವ ಗ್ರಾಮಸ್ಥರಿಗೂ ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವರಿಗೆ ಉಚಿತ ಮಾಸ್ಕ್ ವಿತರಣೆ ನೀಡಲಾಗು ವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಮೂಲಕ ವಿನಂತಿ ಮಾಡ ಲಾಗಿದೆ. ಗ್ರಾಮಸಭೆಯನ್ನು ಲಿಂಕ್ https://tinyurl.com/Shirva GramaSabhe ಮೂಲಕ ವೀಕ್ಷಿಸಬಹುದು ಎಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News