ಶಿರಾಲಿ ಹೆದ್ದಾರಿ ಬದಿ ನಿಂತ ಮಳೆ ನೀರು: ಗಾಳ ಹಾಕಿ ಪ್ರತಿಭಟನೆ

Update: 2021-07-18 16:43 GMT

ಭಟ್ಕಳ : ಕಳೆದ ಐದಾರು ದಿನಗಳಿಂದ ಭಟ್ಕಳ ತಾಲೂಕಿನಾದ್ಯಂತ ನಿರಂತರ ಮಳೆ ಬೀಳುತ್ತಿದ್ದು ಶಿರಾಲಿಯ ರಾ.ಹೆ.66 ರಲ್ಲಿ ಅಮರ್ಪಕ ಕಾಮಾಗಾರಿಯಿಂದ ಹೆದ್ದಾರಿ ಇಕ್ಕೆಲಗಳಲ್ಲಿ ಮಳೆ ನೀರು ನಿಂತುಕೊಂಡಿದ್ದು ಜನರು ನಿಂತ ನೀರಲ್ಲಿ ಗಾಳ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ರವಿವಾರ ಶಿರಾಲಿ ಜನತಾ ವಿದ್ಯಾಲಯದ ಎದುರು ನಡೆದಿದೆ.

ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಕಾಮಗಾರಿಯೂ ಮತ್ತಷ್ಟು ಅವಾಂತರ ಸೃಷ್ಟಿಸಿದೆ. ಮಳೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇರದ ಕಾರಣ ನೀರು ಹೆದ್ದಾರಿ ಎರಡೂ ಕಡೆ ಹೊಳೆಯ ರೂಪದಲ್ಲಿ ನಿಂತುಕೊಂಡಿದ್ದು ಇದರ ಪ್ರತಿಭಟನಾರ್ಥ ಗಾಳ ಬಳಸಿ ಹೆದ್ದಾರಿಯಲ್ಲಿ ನಿಂತ ನೀರಿನಲ್ಲಿ ಮೀನು ಹಿಡಿಯಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News