ಜಮ್ಮು-ಕಾಶ್ಮೀರ: ಝೇಲಂ ನದಿಯಲ್ಲಿ ಜಲಸಾರಿಗೆಯ ಪುನರುಜ್ಜೀವನಕ್ಕಾಗಿ ಐಷಾರಾಮಿ ಬೋಟಿನ ಆಮದು

Update: 2021-07-18 16:48 GMT

ಶ್ರೀನಗರ,ಜು.18: ಕಾಶ್ಮೀರದಲ್ಲಿ ಜಲಸಾರಿಗೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಝೇಲಂ ನದಿಯಲ್ಲಿ ವಿಹಾರಕ್ಕಾಗಿ ಜಮ್ಮು-ಕಾಶ್ಮೀರ ಜಲಸಾರಿಗೆ ಪ್ರಾಧಿಕಾರವು ತನ್ನ ಮೊದಲ ಆಮದಿತ ಐಷಾರಾಮಿ ಬೋಟಿನೊಂದಿಗೆ ಸಜ್ಜಾಗಿದೆ. 30 ಆಸನಗಳ ‘ಬಸ್ ಬೋಟ್’ ಜು.10ರಿಂದ ಝೇಲಂ ನದಿಯಲ್ಲಿ ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ. 

ಸಾಗರ ಉಪಕರಣ ಪೂರೈಕೆ ಸಂಸ್ಥೆ ಸುಖಾಂಗ್ ಎಂಟರ್ಪ್ರೈಸಸ್ ಝೇಲಂ ನದಿಯಲ್ಲಿ ಬಸ್ಬೋಟ್ನ ಜೊತೆಗೆ 10-12 ಆಸನಗಳ ಐಷಾರಾಮಿ ಪೊಂಟೂನ್ ಬೋಟ್ (ಚಪ್ಪಟೆ ತಳದ ದೋಣಿ) ಮತ್ತು ರಕ್ಷಣಾ ಬೋಟಿನ ಸಂಚಾರವನ್ನೂ ಆರಂಭಿಸಿದೆ. 

ಬಸ್ ಬೋಟ್ ಮತ್ತು ರಕ್ಷಣಾ ಬೋಟ್ ನ್ಯೂಝಿಲ್ಯಾಂಡ್‌ ನಿಂದ ಆಮದಾಗಿದ್ದರೆ, ಪೊಂಟೂನ್ ಬೋಟ್ ಅನ್ನು ಅಮೆರಿಕದಿಂದ ತರಿಸಲಾಗಿದೆ ಎಂದು ಸುಖಾಂಗ್ ಎಂಟರ್ಪ್ರೈಸಸ್ ನ ನಿರ್ದೇಶಕ ಇಮ್ರಾನ್ ಮಲಿಕ್ ತಿಳಿಸಿದರು. ಕಾಶ್ಮೀರದ ಹೆಗ್ಗರುತು ಮತ್ತು ಪರಂಪರೆಗಳಲ್ಲಿ ಒಂದಾಗಿರುವ ಝೇಲಂ ನದಿಯಲ್ಲಿ ದಶಕಗಳಷ್ಟು ಹಳೆಯದಾದ ಜಲಸಾರಿಗೆ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು ಈ ನೂತನ ಅಭಿವೃದ್ಧಿ ಕ್ರಮದ ಉದ್ದೇಶವಾಗಿದೆ. ಬಸ್ ಬೋಟ್ ಏರ್ ಕಂಡಿಷನಿಂಗ್, ಮ್ಯೂಸಿಕ್ ಸಿಸ್ಟಮ್ ಮತ್ತು ಟಿವಿ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ. ಜಲಸಾರಿಗೆಯು ರಸ್ತೆಗಳಲ್ಲಿ ವಾಹನಗಳ ದಟ್ಟಣೆಯನ್ನು ತಗ್ಗಿಸಲು ಉತ್ತಮ ಪರಿಹಾರವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News