ಕಾಪು: ಕಾರು ಅಪಘಾತಕ್ಕೆ ಓರ್ವ ಬಲಿ
Update: 2021-07-19 13:32 IST
ಕಾಪು: ಕಾರು ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಿಯೂರು ಸಮೀಪದ ಪೆಜತಕಟ್ಟೆ ಎಂಬಲ್ಲಿ ರವಿವಾರ ತಡರಾತ್ರಿ ಸಂಭವಿಸಿದೆ.
ಕಟಪಾಡಿ ಪಳ್ಳಿಗುಡ್ಡೆ ನಿವಾಸಿ ರವೀಂದ್ರ ಪೂಜಾರಿ (37) ಮೃತಪಟ್ಟವರಾಗಿದ್ದು, ಇವರು ರವಿವಾರ ರಾತ್ರಿ ಎಲ್ಲೂರಿನಲ್ಲಿರುವ ಸ್ನೇಹಿತ ಮನೆಗೆ ಹೋಗಿ ಹಿಂತಿರುಗಿ ಬರುತ್ತಿರುವ ವೇಳೆ ಮಣ್ಣಿನ ರಸ್ತೆಗಿಳಿದ ಕಾರು ಢಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.