×
Ad

ಕಾಂಚನ ಹೋಂಡಾ: 'ಹೋಂಡಾ ಬಿಗ್ ವಿಂಗ್' ಮೋಟರ್ ಸೈಕಲ್ ಮಂಗಳೂರು ಮಾರುಕಟ್ಟೆಗೆ

Update: 2021-07-19 21:33 IST

ಮಂಗಳೂರು, ಜು.19: ವಾಹನ ಮಾರಾಟ ಮತ್ತು ಸೇವೆಯಲ್ಲಿ ಅಪಾರ ಅನುಭವ ಹೊಂದಿರುವ ಹಾಗೂ ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನ ಮೋಟರ್ಸ್‌ನ ಅಂಗಸಂಸ್ಥೆ ಕಾಂಚನ ಹೋಂಡಾದ ಕಂಕನಾಡಿ ಬೈಪಾಸ್ ರಸ್ತೆಯ ಶೋರೂಂನಲ್ಲಿ ಹೋಂಡಾದ ಬಿಗ್ ವಿಂಗ್ ಮೋಟರ್ ಸೈಕಲ್‌ಗಳು ಮಂಗಳೂರು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.

ಯುವ ಜನಾಂಗದ ಬಹುನಿರೀಕ್ಷಿತ ಹೋಂಡಾ ಬಿಗ್ ವಿಂಗ್ ಮೋಟರ್ ಸೈಕಲ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಹೋಂಡಾ ವಾಹನಗಳ ಅಧಿಕೃತ ಮಾರಾಟಗಾರರಾದ ಕಾಂಚನ ಹೋಂಡಾ ಶೋರೂಂನಲ್ಲಿ ಮಾತ್ರವೇ ಈ ಬಿಗ್ ವಿಂಗ್ ಮೋಟರ್ ಸೈಕಲ್‌ಗಳು ಖರೀದಿಗೆ ಲಭ್ಯ ಇದೆ.

ಹೋಂಡಾ ಸಿಬಿ 350 ಆರ್‌ಎಸ್ ವಿಶೇಷತೆ: ಹೋಂಡಾದ ಮಹಾತ್ವಾಕಾಂಕ್ಷೆಯ ಉತ್ಪನ್ನ ಎಂದು ಹೆಸರಾದ ಹೋಂಡಾ ಸಿಬಿ 350 ಆರ್‌ಎಸ್ ದ್ವಿಚಕ್ರ ವಾಹನವು ‘ಲೈವ್ ಯುವರ್ ಸ್ಟೋರಿ’ ಎನ್ನುವ ಟ್ಯಾಗ್‌ಲೈನ್‌ನಲ್ಲಿ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ.

ಯುವ ಜನಾಂಗದ ಕನಸಿಗೆ ಸರಿಹೊಂದುವ ಬೃಹತ್ ಆಕಾರದ ದ್ವಿಚಕ್ರ ವಾಹನವು ಕ್ಷಣಮಾತ್ರದಲ್ಲೇ ಆಕರ್ಷಿಸುವ ಶಕ್ತಿ ಹೊಂದಿದೆ. ಈ ವಾಹನವು ಉತ್ಕೃಷ್ಟ ವಿನ್ಯಾಸದ ಡ್ಯುಯಲ್ ಟೋನ್ ಫ್ಯೂಯೆಲ್ ಟ್ಯಾಂಕ್, 4 ಸ್ಟ್ರೋಕ್ ಎಸ್‌ಐ ಬಿಎಸ್-6 ಇಂಜಿನ್, ಫ್ರಂಟ್ 7 ವೈ ಶೇಪ್ಡ್ ಅಲೋಯ್ ವೀಲ್, ಎಲ್‌ಇಡಿ ಹೆಡ್‌ಲ್ಯಾಂಪ್, ಅಂಡರ್‌ಸೀಟ್ ಎಲ್‌ಇಡಿ ಟೇಲ್ ಲ್ಯಾಂಪ್ ವಿತ್ ಐ ಶೇಪ್ಡ್ ಎಲ್‌ಇಡಿ ವಿಂಕರ್ಸ್, ಹೆಡ್‌ಲ್ಯಾಂಪ್ ರಿಂಗ್‌ನ್ನು ಒಳಗೊಂಡಿದೆ.
ಇಂಜಿನ್‌ಗೆ ಅಧಿಕ ರಕ್ಷಣೆ ನೀಡುವ ಸ್ಕಿಡ್ ಪ್ಲೇಟ್, ಫ್ರಂಟ್ ಫೋರ್ಕ್ ಬೂಟ್ಸ್, ಪವರ್‌ಫುಲ್ 350 ಸಿಸಿ ಇಂಜಿನ್, ಅಸಿಸ್ಟ್ ಆ್ಯಂಡ್ ಸ್ಲಿಪ್ಪರ್ ಕ್ಲಚ್, ಮೇನ್ ಶಾಫ್ಟ್ ಕೋಆ್ಯಕ್ಸಿಯಲ್ ಬ್ಯಾಲೆನ್ಸರ್, ಸ್ಪೋರ್ಟಿ ಗ್ರಾಬ್ ರೇಲ್, ಟಕ್ ಆ್ಯಂಡ್ ರೋಲ್ ಸೀಟ್, ಅದ್ಭುತ ರೈಡಿಂಗ್ ಪೊಜಿಶನ್, ರಿಯರ್ ಫೂಟ್‌ರೆಸ್ಟ್ ವಿತ್ ಮಫ್ಲರ್ ಹೀಟ್ ಪ್ರೊಟೆಕ್ಟರ್, ಡ್ಯುಯೆಲ್ ಚಾನೆಲ್ ಎಬಿಎಸ್, ರೋರಿಂಗ್ ಎಕ್ಸಾಸ್ಟ್ ನೋಟ್, ಹೋಂಡಾ ಸೆಲೆಕ್ಟೇಬಲ್ ಟೋರ್ಕ್ ಕಂಟ್ರೋಲ್ (ಎಚ್‌ಎಸ್‌ಟಿಸಿ), ಅಡ್ವಾನ್ಸ್‌ಡ್ ಡಿಜಿಟಲ್ ಎನಲಾಗ್ ಮೀಟರ್, ಡಿಸ್ಟನ್ಸ್ ಟು ಎಂಟಿ, ಎವರೇಜ್ ಮೈಲೇಜ್, ಸೈಡ್ ಸ್ಟಾಂಡ್ ವಿತ್ ಇಂಜಿನ್ ಇನ್‌ಹಿಬಿಟರ್, ಬ್ಯಾಟರಿ ವೋಲ್ಟೇಜ್ ಮೀಟರ್, ಹಾಫ್ ಡುಪ್ಲೆಕ್ಸ್ ಕ್ರೇಡಲ್ ಫ್ರೇಮ್, ವೈಡರ್ ರಿಯರ್ 150/70-17 ಪ್ಯಾಟರ್ನ್ ಟೈರ್ ಹೊಂದಿದೆ.

ಹೋಂಡಾ ಹೈನಸ್ ಸಿಬಿ 350 ವಿಶೇಷತೆ: ಸಿಬಿ ಬ್ರ್ಯಾಂಡ್‌ನ ಶಕ್ತಿ ಮತ್ತು ಪರಾಕ್ರಮ ಇಡೀ ಜಗತ್ತಿಗೆ ಅನಾವರಣಗೊಂಡಿದೆ. ಈ ಪೌರಾಣಿಕ ಪರಂಪರೆಯನ್ನು ಮುಂದುವರಿಸಲು ಹೋಂಡಾ ಹೈನಸ್ ಸಿಬಿ 350 ದ್ವಿಚಕ್ರ ವಾಹನವು ಸರ್ವ ಸನ್ನದ್ಧವಾಗಿದೆ. ಆಕರ್ಷಣೀಯ ಹಾಗೂ ಭವ್ಯವಾದ ವಿನ್ಯಾಸ, ಪವರ್ ಫುಲ್ 350 ಸಿಸಿ ಇಂಜಿನ್, ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸಾ ಕಂಟ್ರೋಲ್ ಸಿಸ್ಟಮ್, ಡ್ಯುಯಲ್ ಟೋನ್ ಫ್ಯುಯೆಲ್ ಟ್ಯಾಂಕ್ ವಿತ್ ಬೋಲ್ಡ್ ಹೋಂಡಾ ಎಂಬ್ಲೆಮ್, ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್ ಆ್ಯಂಡ್ ಟೇಲ್ ಲ್ಯಾಂಪ್ ವಿತ್ ರಿಂಗ್ ಟೈಪ್ ವಿಂಕರ್ಸ್, ಮೇನ್ ಶಾಫ್ಟ್ ಕೋಆ್ಯಕ್ಸಿಯಲ್ ಬ್ಯಾಲೆನ್ಸರ್, ಅಸಿಸ್ಟ್ ಆ್ಯಂಡ್ ಸ್ಲಿಪ್ಪರ್ ಕ್ಲಚ್, ರೋರಿಂಗ್ ಎಕ್ಸಾಸ್ಟ್ ನೋಟ್ ಸೌಲಭ್ಯಗಳನ್ನು ಒಳಗೊಂಡಿದೆ.

ಬುಕಿಂಗ್ ಆರಂಭ: ಕೇವಲ ಮೂರು ದಿನಗಳಲ್ಲಿ ದಾಖಲೆಯ 100ಕ್ಕೂ ಅಧಿಕ ವಾಹನಗಳ ಬುಕಿಂಗ್ ಆಗಿದೆ. ಕಾಂಚನ ಹೋಂಡಾದ ಮಂಗಳೂರಿನ ಕಂಕನಾಡಿ ಬೈಪಾಸ್ ಶೋಂರೂಮ್‌ನಲ್ಲಿ ಹೋಂಡಾ ಸಿಬಿ 350 ಆರ್‌ಎಸ್, ಹೋಂಡಾ ಹೈನಸ್ ಸಿಬಿ 350 ದ್ವಿಚಕ್ರ ವಾಹನಗಳು ಡಿಸ್‌ಪ್ಲೇ ಹಾಗೂ ಟೆಸ್ಟ್ ರೈಡ್ ಗೆ ಲಭ್ಯ ಇವೆ. ಈಗಾಗಲೇ ವಾಹನಗಳ ಬುಕಿಂಗ್ ಕಾರ್ಯ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ 8147599847ನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News