ಮಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಪ್ರತಿಭಟನೆ

Update: 2021-07-20 16:52 GMT

ಮಂಗಳೂರು, ಜು.20: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಗುರುಪುರ ವಲಯ ಸಮಿತಿ ಮಂಗಳವಾರ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿತು.

 ಕಾರುತ್ತಾ, ಚುನಾವಣೆ ವೇಳೆ ಕಪ್ಪು ಹಣ, ಬೆಲೆ ಏರಿಕೆ ನಿಯಂತ್ರಣ, ಬಡವರ ಕಾಳಜಿಯಂತಹ ಹತ್ತು ಹಲವಾರು ಆಶ್ವಾಸನೆ ನೀಡಿರುವ ಬಿಜೆಪಿಗರು ಅಧಿಕಾರಕ್ಕೆ ಬಂದ ಬಳಿಕ ಎಲ್ಲವನ್ನೂ ಮರೆತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆಕ್ರೋಶ ವ್ಯಕ್ತಪಡಿಸಿದರು.

ಬಡವರು, ರೈತರ ಮೇಲೆ ದಬ್ಬಾಳಿಕೆ ಮುಂದುವರಿದಿದೆ. ಸ್ವರ್ಗವನ್ನೇ ಧರೆಗಿಳಿಸುವಂತಹ ಬಣ್ಣದ ಮಾತುಗಳಿಂದ ಮತದಾರರನ್ನು ಪ್ರಧಾನಿ ಮೋದಿ ಓಲೈಕೆ ಮಾಡಿದ್ದರು. ‘ಅಚ್ಚೇ ದಿನ್’ ಎಲ್ಲಿದೆ ಮತ್ತು ಯಾರಿಗಿದೆ ? ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳು ಬೆಲೆ ಗಗನಕ್ಕೇರುವಂತೆ ಮಾಡಿರುವುದು ಮೋದಿಗಿರುವ ಬಡಜನರ ಕಾಳಜಿಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಸಿಪಿಐಎಂ ಗುರುಪುರ ವಲಯ ಸಮಿತಿ ಕಾಯದರ್ಶಿ ಸದಾಶಿವ ದಾಸ್ ಮಾತನಾಡಿ, ಮೋದಿ ನಿರ್ದೇಶನದಂತೆ ಬಿಜೆಪಿ ಸಾಧನೆ ಪಟ್ಟಿ ಜನರ ಬಳಿ ಕೊಂಡೊಯ್ಯುವ ಕಾರ್ಯಕರ್ತರು ಆ ಪಟ್ಟಿಯಲ್ಲಿ ಬೆಲೆ ಏರಿಕೆ ಸೇರಿಸಿಕೊಂಡಿದ್ದಾರೆಯೇ ? ಮೋದಿಯವರು ಉದ್ಯಮಿಗಳು, ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಗುರುಪುರ ವಲಯ ಸಮಿತಿಯ ಗಂಗಯ್ಯ ಅಮೀನ್, ನೋಣಯ್ಯ ಗೌಡ, ಡಿ. ಅಶೋಕ್, ಬಾಬು ಸಾಲ್ಯಾನ್, ಭವಾನಿ ವಾಮಂಜೂರು, ಪುಷ್ಪಾ ವಾಮಂಜೂರು, ವಸಂತಿ ಕುಪ್ಪೆಪದವು, ವಾರಿಜಾ ಕುಪ್ಪೆಪದವು ಮತ್ತಿತರರು ಇದ್ದರು. ಮನೋಜ್ ವಾಮಂಜೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News