ತನ್ನದೇ ರಾಕೆಟ್ ನಲ್ಲಿ ಬಾಹ್ಯಾಕಾಶ ಯಾತ್ರೆಗೆ ಸಿದ್ಧವಾದ ಜೆಫ್ ಬೆಝೋಸ್

Update: 2021-07-20 17:21 GMT
photo : twitter/@BarstoolBigCat

ವಾಷಿಂಗ್ಟನ್, ಜು.20: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಅಮಝಾನ್ ಸ್ಥಾಪಕ ಜೆಫ್ ಬೆಝೋಸ್ ತನ್ನದೇ ಸ್ವಂತ ರಾಕೆಟ್ ‘ಬ್ಲೂ ಒರಿಜಿನ್’ನಲ್ಲಿ ಮಂಗಳವಾರ ಬಾಹ್ಯಾಕಾಶ ಯಾತ್ರೆಗೆ ಸಿದ್ಧವಾಗಿದ್ದಾರೆ.

ವೆಸ್ಟ್ ಟೆಕ್ಸಾಸ್ನಿಂದ ಪ್ರಥಮ ಮಾನವಸಹಿತ ಯಾತ್ರೆ ಆರಂಭಿಸಿದ ‘ಬ್ಲೂ ಒರಿಜಿನ್’ 11 ನಿಮಿಷದಲ್ಲಿ ಕರ್ಮನ್ ರೇಖೆ ದಾಟಿ ಹಿಂದಿರುಗಲಿದೆ (ಭೂಮಿ ಮತ್ತು ಬಾಹ್ಯಾಕಾಶವನ್ನು ಬೇರ್ಪಡಿಸುವ ಗಡಿಯನ್ನು ಕರ್ಮನ್ ರೇಖೆ ಎಂದು ಹೆಸರಿಸಲಾಗಿದೆ).ಬಾಹ್ಯಾಕಾಶ ಯಾತ್ರೆ ಮುಗಿಸಿ ಭೂಮಿಗೆ ಹಿಂತಿರುಗಲಿದೆ. 

ಚಂದ್ರನ ಮೇಲೆ ಪ್ರಪ್ರಥಮ ಬಾರಿಗೆ ಮನುಷ್ಯ ಪಾದಾರ್ಪಣೆ ಮಾಡಿದ ಐತಿಹಾಸಿಕ ಘಟನೆಯ 52ನೇ ವರ್ಷಾಚರಣೆ ಸಂದರ್ಭದಲ್ಲೇ ಜೆಫ್ ಬೆಝೋಸ್ ಬಾಹ್ಯಾಕಾಶ ಯಾತ್ರೆಯೂ ನಡೆಯುತ್ತಿದೆ. ಆದರೆ ಮಿಲಿಯಾಧೀಶರ ನಡುವಿನ ಬಾಹ್ಯಾಕಾಶ ಯಾನ ಪೈಪೋಟಿಯಲ್ಲಿ ವರ್ಜಿನ್ ಜೈಜಾಂಟಿಕ್ ಸ್ಥಾಪಕ ರಿಚರ್ಡ್ ಬ್ರಾನ್ಸನ್ ಮೇಲುಗೈ ಸಾಧಿಸಿದ್ದು, ಅವರ ಬಾಹ್ಯಾಕಾಶ ಯಾತ್ರೆ ಜುಲೈ 11ರಂದು ನಡೆದಿದೆ. ಆದರೆ ತಮ್ಮಿಬ್ಬರ ಮಧ್ಯೆ ಬಾಹ್ಯಾಕಾಶ ಯಾನದ ಸ್ಪರ್ಧೆ ಇಲ್ಲ ಎಂದು ಬೆಝೋಸ್ ಹಾಗೂ ಬ್ರಾನ್ಸನ್ ಸ್ಪಷ್ಟಪಡಿಸಿದ್ದಾರೆ.

ಬಾಹ್ಯಾಕಾಶಕ್ಕೆ ತೆರಳಿದ ಪ್ರಥಮ ಮಾನವ ಯೂರಿ ಗಗಾರಿನ್ ಮತ್ತು ಅದು ಬಹಳ ಹಿಂದೆ ನಡೆದಿದೆ . ಈಗ ನಡೆಯುತ್ತಿರುವುದು ಸ್ಪರ್ಧೆಯಲ್ಲ, ಬಾಹ್ಯಾಕಾಶಕ್ಕೆ ರಸ್ತೆ ನಿರ್ಮಿಸುವ ಕೆಲಸವಿದು. ಇದರಿಂದ ಭವಿಷ್ಯದ ತಲೆಮಾರಿನವರು ಬಾಹ್ಯಾಕಾಶದಲ್ಲಿ ಅದ್ಭುತ ಸಾಧನೆ ಮಾಡಲು ಪ್ರೇರಣೆಯಾಗಲಿದೆ ಎಂದು ಬೆಝೋಸ್ ಪ್ರತಿಕ್ರಿಯಿಸಿದ್ದಾರೆ. ಕೃತಕ ಗುರುತ್ವಾಕರ್ಷಣೆಯೊಂದಿಗೆ ತೇಲುವ ಬಾಹ್ಯಾಕಾಶ ಕಾಲೊನಿಗಳನ್ನು ನಿರ್ಮಿಸಿ ಅಲ್ಲಿ ಮಿಲಿಯಾಂತರ ಜನರನ್ನು ನೆಲೆಗೊಳಿಸುವ ಗುರಿಯೊಂದಿಗೆ 2000ನೇ ಇಸವಿಯಲ್ಲಿ ಬೆಝೋಸ್ ಬ್ಲೂ ಒರಿಜಿನ್ ಅನ್ನು ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News