ಗೂಡ್ಸ್ ವಾಹನ ಢಿಕ್ಕಿ: ಸೈಕಲ್ ಸವಾರ ಮೃತ್ಯು
Update: 2021-07-21 20:33 IST
ಕುಂದಾಪುರ, ಜು.21: ಮಹೀಂದ್ರ ಬೊಲೆರೋ ವಾಹನವೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸೈಕಲ್‌ನಲ್ಲಿ ಹೋಗುತಿದ್ದ ಸವಾರ ಮೃತಪಟ್ಟ ಘಟನೆ ತಲ್ಲೂರು ಗ್ರಾಮದ ಪ್ರವಾಸಿ ಹೊಟೇಲ್ ಬಳಿ ರಾ.ಹೆದ್ದಾರಿ 66ರಲ್ಲಿ ಮಂಗಳವಾರ ನಡೆದಿದೆ.
ಪ್ರಶಾಂತ್ ಎಂಬವರು ಮಹೀಂದ್ರ ಬೊಲೆರೋ ಗೂಡ್ಸ್ ವಾಹನವನ್ನು ಕುಂದಾಪುರ ಕಡೆಯಿಂದ ಹೆಮ್ಮಾಡಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ ದಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಬದಿಗೆ ತಂದು ಅದೇ ದಿಕ್ಕಿನಲ್ಲಿ ಸೈಕಲ್‌ನಲ್ಲಿ ಸಾಗುತಿದ್ದ ವಿಶ್ವನಾಥ ಶೆಟ್ಟಿ ಎಂಬವರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದರು ಎಂದು ದೂರಲಾಗಿದೆ.
ಇದರಿಂದ ತಲೆಗೆ ಹಾಗೂ ಮೈಗೆ ತೀವ್ರವಾಗಿ ಗಾಯಗೊಂಡ ವಿಶ್ವನಾಥ ಶೆಟ್ಟಿ ಅವರನ್ನು ಮೊದಲು ಕುಂದಾಪುರದ ಆದರ್ಶ ಹಾಗೂ ನಂತರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಂಜೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.