ಪೆಗಾಸಸ್ ಮೂಲಕ ನಮ್ಮನ್ನೂ ಟಾರ್ಗೆಟ್ ಮಾಡಿರಬಹುದು: ಪ್ರತಿಭಟನಾನಿರತ ರೈತ ನಾಯಕರ ಶಂಕೆ

Update: 2021-07-22 11:33 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್ ಮೂಲಕ ಬೇಹುಗಾರಿಕೆ ನಡೆಸಲಾಗಿದೆಯೆನ್ನಲಾದ ಆರೋಪದ ತೂಗುಗತ್ತಿ ಸರಕಾರದ ವಿರುದ್ಧ ನೇತಾಡುತ್ತಿರುವ ನಡುವೆಯೇ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ರೈತ ನಾಯಕರೂ ಈಗ ಸರಕಾರವನ್ನು ಶಂಕಿಸಲಾರಂಭಿಸಿದ್ದಾರೆ ಹಾಗೂ ಸರಕಾರ ತಮ್ಮ ಮೇಲೆಯೂ ಬೇಹುಗಾರಿಕೆ ನಡೆಸುತ್ತಿರಬಹುದೆಂದು ಹೇಳುತ್ತಿದ್ದಾರೆ.

“ಇದೊಂದು ನೈತಿಕತೆಯಿಲ್ಲದ ಸರಕಾರ. ಸರಕಾರ ಬೇಹುಗಾರಿಕೆ ನಡೆಸಿದವರಲ್ಲಿ ನಮ್ಮ ಕೆಲವರ ಸಂಖ್ಯೆಗಳೂ ಇರಬಹುದೆಂಬ ಶಂಕೆಯಿದೆ, ಅವರು ನಮ್ಮ ಮೇಲೆಯೂ ಕಣ್ಣಿಟ್ಟಿದ್ದಾರೆ'' ಎಂದು ರೈತ ನಾಯಕ ಶಿವ್ ಕುಮಾರ್ ಕಕ್ಕ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ “2020-21ರ ಡೇಟಾ ಬಯಲುಗೊಂಡಾಗ ನಮ್ಮ ಸಂಖ್ಯೆಗಳು ಸಹಜವಾಗಿ ಅದರಲ್ಲಿರಲಿವೆ,'' ಎಂದು ಹೇಳಿದ್ದಾರೆ.

“ತಾವು ಮೂರ್ಖರಲ್ಲ ಎಂದು ಸಾಬೀತುಪಡಿಸಲು ಪ್ರತಿಭಟನಾನಿರತ ರೈತರು ಇಂದು ಜಂತರ್ ಮಂತರ್ ಗೆ ಬಂದಿದ್ದಾರೆ,'' ಎಂದು ಹೇಳಿದ ಅವರು ಇಂಗ್ಲೆಂಡ್‍ನ ಸಂಸತ್ತು ನಮ್ಮ ವಿಷಯಗಳ ಕುರಿತು ಚರ್ಚಿಸಬಹುದು ಆದರೆ ನಮ್ಮ ಸಂಸತ್ತಲ್ಲ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News