ಕರ್ನಾಟಕದ ಕರಾವಳಿ ಮೀನುಗಾರರಿಗೆ ಎಚ್ಚರಿಕೆ: ಹವಾಮಾನ ಕೇಂದ್ರ
Update: 2021-07-23 19:44 IST
ಉಡುಪಿ, ಜು. 23: ಕರ್ನಾಟಕ ಕರಾವಳಿಯುದ್ದಕ್ಕೂ ಗಂಟೆಗೆ 40-50ಕಿ.ಮೀ. ವೇಗದ ಗಾಳಿಯು ಬೀಸುವ ಸಾಧ್ಯತೆ ಇರುವುದ ರಿಂದ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರು ಜು.23ರಿಂದ 27ರವರೆಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಬೆಂಗಳೂರಿನ ಹವಾಮಾನ ಕೇಂದ್ರವು ಎಚ್ಚರಿಕೆ ನೀಡಿದೆ.