×
Ad

ಬಾಲಕಿ ಪತ್ತೆಗೆ ಲುಕ್‌ಔಟ್ ನೋಟೀಸ್ ಜಾರಿ

Update: 2021-07-23 21:21 IST

ಮಣಿಪಾಲ, ಜು.23: ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿರುವ ಪೆರಂಪಳ್ಳಿಯ ಅವೀನಾ(16) ಎಂಬಾಕೆಯ ಪತ್ತೆಗಾಗಿ ಮಣಿಪಾಲ ಪೊಲೀಸರು ಲುಕ್‌ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ.

ಈಕೆ ಎ.13ರಂದು ತನ್ನ ತಾಯಿಯೊಂದಿಗೆ ಮೊಬೈಲ್ ವಿಚಾರಕ್ಕೆ ಜಗಳ ಮಾಡಿ, ಅದೇ ದಿನ ರಾತ್ರಿ ಮನೆಯಿಂದ ಹೋದವಳು ನಾಪತ್ತೆಯಾಗಿದ್ದಳು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂಭತ್ತನೆ ತರಗತಿ ಕಲಿತಿರುವ ಈಕೆ, ಕನ್ನಡ ಭಾಷೆ ಮಾತನಾಡುತ್ತಾಳೆ. 4.5ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದಾಳೆ. ಈಕೆಗೆ ಬಗ್ಗೆ ಮಾಹಿತಿ ದೊರೆತರೆ ಮಣಿಪಾಲ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ- 0820- 2570328ಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News