ಕಾರ್ಮಿಕರ ಮುಷ್ಕರದ ಹಕ್ಕು ಕಸಿದಿರುವುದನ್ನು ವಿರೋಧಿಸಿ ಪ್ರತಿಭಟನೆ
ಉಡುಪಿ, ಜು.23: ಸಾರ್ವಜನಿಕ ರಂಗದ ಸಂಸ್ಥೆಗಳ ಖಾಸಗೀಕರಣ ವಿರೋಧಿಸಿ ಖಾಸಗೀಕರಣ ವಿರೋಧಿ ವೇದಿಕೆ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಇಂದು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ವೇದಿಕೆ ಜಿಲ್ಲಾ ಸಂಚಾಲಕ ಪ್ರಭಾಕರ್ ಕುಂದರ್ ಮಾತನಾಡಿ, ಕೇಂದ್ರ ಸರಕಾರವು ಸಾರ್ವಜನಿಕ ರಂಗದ ಉದ್ಧಿಮೆಗಳ ಮತ್ತು ಅದರ ಉದ್ಯೋಗಿಗಳ ಮೇಲೆ ತೀವ್ರ ಪ್ರಹಾರ ನಡೆಸುತ್ತಿದೆ. ವಿನಾಶಕಾರಿಯಾದ ಆರ್ಥಿಕ ನೀತಿಯಾಗಿ ರುವ ನವ ಉದಾರೀಕರಣ ಪ್ರಕ್ರಿಯೆಯ ಭಾಗವಾಗಿ ಸರಕಾರವು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕಳಚಿ ಖಾಸಗಿ ಧಣಿಗಳಿಗೆ ಹಸ್ತಾಂತರಿಸುವ ಕಾರ್ಯ ದಲ್ಲಿ ತೊಡಗಿದೆ ಎಂದು ದೂರಿದರು.
ಕೇಂದ್ರ ಸರಕಾರವು ಹೊರಡಿಸಿರುವ ಗಜೆಟ್ ಅಧಿಸೂಚನೆಯು ರಕ್ಷಣಾ ಸಾಮಾಗ್ರಿಗಳನ್ನು ತಯಾರಿಸುವ ಸಂಸ್ಥೆಗಳಲ್ಲಿ ಮುಷ್ಕರ, ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಈ ಮೂಲಕ ಇಲ್ಲಿನ ಕಾರ್ಮಿಕರ ಮುಷ್ಕರ ಮತ್ತು ಪ್ರತಿ ಭಟನೆಯ ಹಕ್ಕನ್ನು ಸರಕಾರ ಕಸಿದುಕೊಂಡಿದೆ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವ ರಕ್ಷಣಾ ಉತ್ಪಾದನೆಗಳ ಖಾಸಗೀಕರಣದ ಹೆಜ್ಜೆಯಾಗಿದೆ. ಸರಕಾರ ಕೂಡಲೇ ಈ ಸುಗ್ರಿವಾಜ್ಞೆಯನ್ನು ಹಿಂದೆಗೆದುಕೊಳ್ಳ ೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಮುಖಂಡರಾದ ಶಶಿಧರ್ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು.