×
Ad

ಬ್ರಹ್ಮಾವರ : ಸ್ಥಳೀಯ ಯೋಜನಾ ಪ್ರದೇಶ ಷೋಷಣೆ ರದ್ದು

Update: 2021-07-23 21:30 IST

ಉಡುಪಿ, ಜು. 23: ಬ್ರಹ್ಮಾವರ ಯೋಜನಾ ಪ್ರಾಧಿಕಾರ ರಚನೆಯಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳು ಉಂಟಾಗುವುದರಿಂದ ಸರಕಾರ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಬಿ)ರನ್ವಯ ಬ್ರಹ್ಮಾವರಕ್ಕೆ ಸಂಬಂಧಿಸಿ ಮಾಡಲಾಗಿದ್ದ ಸ್ಥಳೀಯ ಯೋಜನಾ ಪ್ರದೇಶ ಘೋಷಣೆಯನ್ನು ರದ್ದುಪಡಿಸಿದೆ.

ಈ ಬಗ್ಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಮಾಡಿದ ಮನವಿ ಯನ್ನು ಪುರಸ್ಕರಿಸಿದ ಸರಕಾರ, ಬ್ರಹ್ಮಾವರ ಯೋಜನಾ ಪ್ರಾಧಿಕಾರವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

ಬ್ರಹ್ಮಾವರ ಪಟ್ಟಣವನ್ನು ಪುರಸಭೆಯಾಗಿ ಘೋಷಿಸಿವು ಪ್ರಕ್ರಿಯೆ ನಡೆಯುತಿ ದ್ದುದರಿಂದ ಬ್ರಹ್ಮಾವರ ಪಟ್ಟಣಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ1961ರ ಕಲಂ 4(ಬಿ)ರನ್ವಯ ಸ್ಥಳೀಯ ಯೋಜನಾ ಪ್ರದೇಶವನ್ನು ಘೋಷಿಸಿ ಆದೇಶಿಸಲಾಗಿತ್ತು.

ಆದರೆ ಪ್ರಸ್ತುತ ಬ್ರಹ್ಮಾವರ ಪುರಸಭೆ ಘೋಷಣೆ ಮಾಡುವ ಪ್ರಕ್ರಿಯೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದರೂ, ಯೋಜನಾ ಪ್ರಾಧಿಕಾರ ಚಾಲನೆಯಲ್ಲಿತ್ತು. ಇದರಿಂದಾಗಿ ಚಾಂತಾರು, ಹಾರಾಡಿ, ವಾರಂಬಳ್ಳಿ, ಹಂದಾಡಿ ಈ ನಾಲ್ಕು ಗ್ರಾಪಂಗಳಲ್ಲಿ 9-11 ಹಾಗೂ ಕಟ್ಟಡ ಲೈಸನ್ಸ್ ನೀಡುವಲ್ಲಿ ಜನರಿಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತಿದ್ದವು.

ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪಟ್ಟಣ, ಪುರಸಭೆಯಾಗಿ ಘೋಷಣೆಯಾಗುವ ವರೆಗೆ ಸ್ಥಳೀಯ ಯೋಜನಾ ಪ್ರದೇಶ ಘೋಷಣೆ ಮಾಡಿರುವುದನ್ನು ರದ್ದುಪಡಿಸುವಂತೆ ಶಾಸಕ ಕೆ.ರಘುಪತಿ ಭಟ್ ಅವರು ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರಿಗೆ ತ್ತ ಮೂಲಕ ಮನವಿ ಮಾಡಿದ್ದರು.

ಇಲಾಖಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸ್ಥಳೀಯ ಸ್ಥಿತಿಗತಿಗಳನ್ನು ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಂದಕ್ಕೆ ಬ್ರಹ್ಮಾವರ ಪಟ್ಟಣ ಪುರಸಭೆ ಆಗುವವರೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 4 ಬಿ ರನ್ವಯ ಬ್ರಹ್ಮಾವರ ಪಟ್ಟಣಕ್ಕೆ ಸ್ಥಳೀಯ ಯೋಜನಾ ಪ್ರದೇಶ ಘೋಷಣೆ ಮಾಡಿರುವುದನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News