×
Ad

ರಿಲಾಯನ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಕಬೀರ್ ಇಂದಿರಾನಗರ ಆಯ್ಕೆ

Update: 2021-07-24 16:14 IST
 ಕಬೀರ್

ಹಳೆಯಂಗಡಿ: ರಿಲಾಯನ್ಸ್ ಅಸೋಸಿಯೇಷನ್  ಬೊಳ್ಳೂರು ಇದರ ನೂತನ ಅಧ್ಯಕ್ಷರಾಗಿ ಕಬೀರ್ ಇಂದಿರಾನಗರ ಆಯ್ಕೆಯಾಗಿದ್ದಾರೆ.

ಮೊಯಿದಿನ್ ಹಳೆಯಂಗಡಿಯವರ ಅಧ್ಯಕ್ಷತೆಯಲ್ಲಿ ರಿಲಾಯನ್ಸ್ ಭವನದಲ್ಲಿ ನಡೆದ ಸಂಸ್ಥೆಯ 25ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ರಿಯಾಝ್ ಕೊಪ್ಪಳ, ಕಾರ್ಯದರ್ಶಿಯಾಗಿ ಇಕ್ಬಾಲ್ ಎಂ.ಎ., ಜೂತೆ ಕಾರ್ಯದರ್ಶಿಯಾಗಿ ಫಾರೂಕ್ ನವರಂಗ್, ಲೆಕ್ಕ ಪರಿಶೋಧಕರಾಗಿ ಕೌಶಿಕ್ ಎಂ.ಸಿ.ಎಫ್ ಅವರು ಆಯ್ಕೆಯಾದರು.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಮುಬಾರಕ್ ಇಂದಿರಾನಗರ, ಕ್ರೀಡಾ ಉಸ್ತುವಾರಿಗಳಾಗಿ ಶಂಶೀರ್ ಎಂ.ಎಂ, ಅಕ್ರಮ್ ಇಂದಿರಾನಗರ, ಸ್ವಯಂಸೇವಕ ಉಸ್ತುವಾರಿಗಳಾಗಿ ಮಮ್ತಾಝ್ ಅಲಿ, ಶಾಹುಲ್ ಹಮೀದ್, ಆಸೀಫ್ ಇಂದಿರಾನಗರ, ಅರ್ಷದ್‌ ಬೊಳ್ಳೂರು ಮತ್ತು ಸಲಹೆಗಾರರಾಗಿ ಆರಿಶ್ ನವರಂಗ್, ಅಕ್ಬರ್ ಬೊಳ್ಳೂರು, ಶಮೀಮ್ ಬೊಳ್ಳೂರು ಅವರನ್ನು ಆಯ್ಕೆ ಮಾಡಲಾಯಿತು.

ರಿಲಾಯನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅಕ್ಬರ್ ಬೊಳ್ಳೂರು ವಾರ್ಷಿಕ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ರಿಲಾಯನ್ಸ್ ಅಸೋಸಿಯೇಷನ್ ಎನ್.ಆರ್.ಐ ಘಟಕದ ಆಸೀಫ್ ಮಸ್ಕತ್, ಶಂರೋಜ್ ಕತರ್, ಶಮ್ಮಿ ದುಬೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News