ನೋಂದಾಯಿತ 300 ಮನೆ ಕೆಲಸಗಾರರಿಗೆ ಕಿಟ್ ವಿತರಣೆ
ಉಡುಪಿ, ಜು.24: ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಕೋವಿಡ್-19ರ ಸಂಕಷ್ಟದಲ್ಲಿರುವ 300 ನೋಂದಾಯಿತ ಮನೆ ಕೆಲಸಗಾರರಿಗೆ ಆಹಾರ ಸಾಮಾಗ್ರಿ ಕಿಟ್ಗಳ ವಿತರಣಾ ಕಾರ್ಯಕ್ರಮ ಉಡುಪಿ ಜಿಲ್ಲಾ ಮನೆ ಕೆಲಸಗಾರರ ಸಂಘದ ಸಹಭಾಗಿತ್ವದಲ್ಲಿ ಶನಿವಾರ ಉಡುಪಿ ಸವಿತಾ ಸಮಾಜ ಸಮುದಾಯ ಭವನದಲ್ಲಿ ಜರಗಿತು.
ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಕಿಟ್ಗಳನ್ನು ವಿತರಿಸಿದರು. ಮನೆ ಕೆಲಸದವರ ಜಿಲ್ಲಾ ಸಂಘದ ಅಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಮಾತನಾಡಿದರು.
ಉಡುಪಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಸಿಇಓ ಮಾಲತಿ ಅಶೋಕ್, ಉಡುಪಿ ತಾಲೂಕು ಸವಿತಾ ಸಮಾಜ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮೂಲ್ಕಿ, ಉದ್ಯಮಿ ಗಂಗಾಧರ್ ಭಂಡಾರಿ ಬಿರ್ತಿ, ಜಿಲ್ಲಾ ಸವಿತಾ ಸಮಾಜ ಸಂಚಾಲಕ ಕಾಪು ಸತೀಶ್ ಭಂಡಾರಿ, ರಾಜಶೇಖರ್ ಬೈಕಾಡಿ ಉಪಸ್ಥಿತರಿದ್ದರು. ಸತ್ಯವತಿ ಮಜೂರು ಕಾರ್ಯಕ್ರಮ ನಿರೂಪಿಸಿದರು ಶ್ರೀಲತಾ ಕಾಪು ವಂದಿಸಿದರು.