ಕೋಟ: ವಿಷದ ಹಾವು ಕಡಿದು ಮಹಿಳೆ ಮೃತ್ಯು

Update: 2021-07-24 16:16 GMT

ಕೋಟ, ಜು.24: ವಿಷ ಪೂರಿತ ಹಾವು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸಾಲಿಗ್ರಾಮ ಪಾರಂಪಳ್ಳಿ ಪಡುಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ಪಡುಕೆರೆ ನಿವಾಸಿ ಲಕ್ಷ್ಮಣ ದೇವಾಡಿಗ ಎಂಬವರ ಪತ್ನಿ ಬಾಬಿ (58) ಎಂದು ಗುರುತಿಸಲಾಗಿದೆ. ಇವರು ಜು.23ರಂದು ಮಧ್ಯಾಹ್ನ ಕೊಟ್ಟಿಗೆಯಲ್ಲಿನ ಸೌದೆ ರಾಶಿಯಿಂದ ಕಟ್ಟಿಗೆಯನ್ನು ತೆಗೆಯುವಾಗ ವಿಷ ಪೂರಿತ ಹಾವು ಅವರ ಕೈಗೆ ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರ ಅಸ್ವಸ್ಥ ಗೊಂಡಿದ್ದ ಅವರು, ಜು.24ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು.

ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News