ಬ್ರಹ್ಮಾವರ ಚರ್ಚ್‌ನಲ್ಲಿ ಕಳವು

Update: 2021-07-24 16:17 GMT

ಬ್ರಹ್ಮಾವರ, ಜು.24: ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್‌ನ ಕಚೇರಿಗೆ ಜು.23ರಂದು ರಾತ್ರಿ ನುಗ್ಗಿದ ಕಳ್ಳರು ಸಾವಿರಾರು ರೂ. ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಚರ್ಚಿನ ಕಚೇರಿ ಕೋಣೆಯ ಎದುರಿನ ಕಿಟಕಿಯ ಗಾಜನ್ನು ಒಡೆದು, ಒಳನುಗ್ಗಿದ ಕಳ್ಳರು, ಡ್ರಾವರಿನಲ್ಲಿದ್ದ ಸುಮಾರು 88,000ರೂ. ಕಳವು ಮಾಡಿ ಕೊಂಡು ಹೋಗಿದ್ದಾರೆ. ಅಲ್ಲದೇ ಚರ್ಚಿನ ಅಧೀನದಲ್ಲಿರುವ ನಿರ್ಮಲ ಶಾಲೆಯ ಕಚೇರಿ ಕೋಣೆಯ ಬಾಗಿಲು ಬೀಗವನ್ನು ಮುರಿದು, ಕಪಾಟು ಗಳನ್ನು ಜಾಲಾಡಿಸಿ ಕಳ್ಳತನಕ್ಕೆ ಪ್ರಯತ್ನಿಸಿರುವುದು ಕಂಡುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News