ಯಾಂಬು ಫ್ರೆಂಡ್ಸ್ ವತಿಯಿಂದ ಈದ್ ಟ್ರೋಫಿ ಕ್ರಿಕೆಟ್ ಪಂದ್ಯಾಕೂಟ: ಬ್ಲ್ಯಾಕ್ ಸ್ಟೋನ್ ತಂಡ ಚಾಂಪಿಯನ್

Update: 2021-07-24 16:45 GMT

ಜಿದ್ದಾ : ಈದುಲ್ ಅಝಾ ಪ್ರಯುಕ್ತ ಯಾಂಬು ಫ್ರೆಂಡ್ಸ್ ವತಿಯಿಂದ ಅಶ್ರಫ್ ಬಂಟ್ವಾಳ ಇವರ ನೇತೃತ್ವದಲ್ಲಿ ಸೀಮಿತ ಓವರ್ ಗಳ ಮೂವತ್ತು ಯಾರ್ಡ್ಸ್ ನೊಳಗೊಂಡ ಕ್ರಿಕೆಟ್ ಪಂದ್ಯಾಕೂಟ ಅಲ್ ಹಷ್ಮಿಯಾ ಕ್ರೀಡಾಂಗಣದಲ್ಲಿ ನಡೆಯಿತು.

ಎಚ್ ಎಂ ಆರ್ ಇಂಜಿನಿಯರಿಂಗ್ ಹಾಗೂ ಮಜೀದ್ ಅಲ್ ಅರಬಿ ಇವರ ಮುಖ್ಯ ಪ್ರಾಯೋಜಕತ್ವ ಮತ್ತು ಝೂಮ್ ಟೆಕ್, ಬಿನ್ ಫಹದ್ ಇಂಜಿನಿಯರಿಂಗ್, ಐಕಾನ್ ಕ್ಯಾಂಪ್ ಹಾಗೂ ಕ್ಯಾಟರಿಂಗ್ ಸರ್ವಿಸ್, ಮಂಗಳೂರು ಚಾಲೆಂಜರ್ಸ್, ಬ್ಲಾಕ್ ಸ್ಟೋನ್, ನ್ಯೂ ಇಂಟಿಯೇಟಿವ್, ಅರಾಟ್ಕೊ, ಅಲ್ ಪಲಾಹ್, ಅಲ್ ಅಹ್ಮದಿ, ಇಂಡಿಯನ್ ಫೆಟರ್ನಿಟಿ ಫೋರಮ್ ಹಾಗೂ ಇಂಡಿಯನ್ ಸೋಷಿಯಲ್ ಫೋರಮ್ ಯಾಂಬು ಇವರ ಸಹಕಾರದೊಂದಿಗೆ ಕ್ರೀಡಾಕೂಟ ನೆರವೇರಿತು.

ಯಾಂಬೊದ ಪ್ರತಿಷ್ಠಿತ 12 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಬ್ಲ್ಯಾಕ್ ಸ್ಟೋನ್ ತಂಡವೂ ಅಲ್ ಕೊನಯಿನ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬ್ಲ್ಯಾಕ್ ಸ್ಟೋನ್ ತಂಡದ ಕಪ್ತಾನ ಸಯೀದ್ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಜಯಿಸಿದರೆ ತಂಡದ ಇನ್ನೋರ್ವ ಆಟಗಾರ ಅನ್ಸಾರ್ ಬಲ್ಕುಂಜೆ ಉತ್ತಮ ಎಸೆತಗಾರ ಪ್ರಶಸ್ತಿ ತನ್ನದಾಗಿಸಿಕೊಂಡರು. ಕ್ರಿಡಾಕೂಟದ ಉದ್ದಕ್ಕೂ ಉತ್ತಮ ದಾಂಡುಗಾರಿಕೆ ನಡೆಸಿ ಕೊನಯಿನಿ ತಂಡವನ್ನ ಪ್ರಶಸ್ತಿ ಹಂತಕ್ಕೆ ಪ್ರವೇಶಿಸಲು ಪ್ರಮುಖ ಪಾತ್ರವಹಿಸಿದ ಅಲ್ತಾಫ್ ಉತ್ತಮ ದಾಂಡುಗಾರಿಕೆ ಪ್ರಶಸ್ತಿ ತನ್ನದಾಗಿಸಿಕೊಂಡರು.

ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ನಝೀರ್ ಬಿನ್ ಫಹದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನಿಸಾರ್ ಉಪ್ಟಳ ನೆರವೇರಿಸಿ, ಮಾತನಾಡಿದರು.

ವೇದಿಕೆಯಲ್ಲಿ ಝೂಮ್ ಟೆಕ್ ಮಾಲಕ ಹಸನ್ ಉಪ್ಪಳ, ರಶೀದ್ ಬ್ಲ್ಯಾಕ್ ಸ್ಟೋನ್ ಮೂಡುಬಿದಿರೆ, ಝಮೀರ್ ಕನ್ನಂಗಾರ್, ಸೂಜ ಹಾಗೂ ಲಬೀಬ್ ಉಜಿರೆ ಉಪಸ್ಥಿತರಿದ್ದರು.

ರಕ್ತದಾನ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಲೋಗೊ ಅವಳವಡಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮನ್ನು ಹಫೀಝ್ ಇಸ್ಮಾಯಿಲ್ ನಿರೂಪಿಸಿ, ರೆಹಾನ್ ಗಂಜಿಮಟ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News