ಮಂಗಳೂರು : ಕೆ.ಪಿ. ಇಸ್ಮಾಈಲ್ ನಿಧನ

Update: 2021-07-25 04:49 GMT

ಮಂಗಳೂರು : ನಗರದ ಅಲ್ ವಫಾ ಚಾರಿಟೆಬಲ್‌ ಟ್ರಸ್ಟ್ ಸ್ಥಾಪಕ‌ ಸದಸ್ಯ, ಫಲಾಹ್ ಶಾಲೆಯ ಆಡಳಿತ ಮಂಡಳಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವಾನಿರತರಾಗಿದ್ದ ಕೆ.ಪಿ. ಇಸ್ಮಾಈಲ್ ನಾಗತೋಟ (60) ರವಿವಾರ ಬೆಳಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅಲ್ ವಫಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು ಮತ್ತು ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News