ಜು.29: ದೇರಳಕಟ್ಟೆಯಲ್ಲಿ ಎ.ಕೆ. ಗ್ರೂಪ್ ಮಾಲಕತ್ವದ ಆ್ಯಪಲ್ ಮಾರ್ಟ್‌ನ ನೂತನ ಮಳಿಗೆ ಉದ್ಘಾಟನೆ

Update: 2021-07-25 17:57 GMT

ಮಂಗಳೂರು : ಎ.ಕೆ. ಗ್ರೂಪ್ ಮಾಲಕತ್ವ ಆ್ಯಪಲ್ ಮಾರ್ಟ್ ಹೈಪರ್ ಮಾರ್ಕೆಟ್‌ನ ನೂತನ ಮಳಿಗೆಯು ದೇರಳಕಟ್ಟೆಯ ನಾಟೆಕಲ್‌ನ ಕಣಚೂರು ಆಸ್ಪತ್ರೆಯ ಸಮೀಪ ಜು.29ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನೆಯಾಗಲಿದೆ.

ಮಳಿಗೆಯನ್ನು ನಾಟೆಕಲ್‌ನ ಉದ್ಯಮಿ ಪಿ.ಎಂ. ಕುಂಞಿ ಬಾವ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಕಿಶೋರ್‌ ಕುಮಾರ್ ಸಿ.ಕೆ., ನಾಟೆಕಲ್ ವುಡ್ ಇಂಡಸ್ಟ್ರೀಸ್‌ನ ಕೆ. ಅಬೂಬಕರ್, ಕೊಣಾಜೆಯ ಮಂಗಳಾ ಟ್ರೇಡರ್ಸ್‌ನ ಜಾನ್ ವಿಕ್ಟರ್ ಮೆಂಡೊನ್ಸ, ಆ್ಯಪಲ್ ಮಾರ್ಟ್‌ ಹಾಗೂ ಎ.ಕೆ. ಗ್ರೂಪ್ ಆಫ್ ಸಮೂಹದ ಚೇರ್‌ಮನ್  ಎಂ.ಅಹ್ಮದ್ ಉಪಸ್ಥಿತರಿರುವರು.

ನೂತನ ಮಳಿಗೆಯಲ್ಲಿ‌ ಉತ್ತಮ ಗುಣಮಟ್ಟದ ಮತ್ತು ಬಹು ಬ್ರಾಂಡ್ ಗಳ  ಗ್ಲಾಸ್‌ವೇರ್, ಗ್ರಹಪಯೋಗಿ ವಸ್ತುಗಳು, ಲೇಖನ ಸಾಮಗ್ರಿಗಳು, ಆಟಿಕೆ ಮತ್ತು‌ ಕ್ರೀಡಾ ಸಾಮಗ್ರಿಗಳು, ಇಂಪೋರ್ಟೆಡ್ ಮತ್ತು‌ ಇಂಡಿಯನ್ ಚಾಕೊಲೇಟ್, ತಂಪು ಪಾನೀಯಗಳು, ದಿನಸಿ ಸಾಮಗ್ರಿಗಳು , ಆರ್ಗ್ಯಾನಿಕ್ ಬೇಳೆಕಾಳುಗಳು ಹಾಗೂ ಇನ್ನಿತರ ವಸ್ತುಗಳು ಮಿತದರದಲ್ಲಿ ಲಭ್ಯವಿದೆ. 

ಇದಲ್ಲದೇ ನಗರದ ಪ್ರತಿಷ್ಠಿತ ಡ್ರೈ ಫ್ರೂಟ್ಸ್ ವಿತರಕರಾದ ರೀಮ್ಸ್ ಸಂಸ್ಥೆಯ ಕೌಂಟರ್ ನಲ್ಲಿ ಉತ್ತಮ ಗುಣಮಟ್ಟದ ಬಹು ಶ್ರೇಣಿಯ ಡ್ರೈ ಫ್ರೂಟ್ಸ್ ಗಳು‌ ಮತ್ತು‌ ಹೊಸದಾಗಿ‌  ಶುಭಾರಂಭಗೊಂಡ ಆ್ಯಪಲ್ ಮೊಬೈಲ್ ಮಾರ್ಟ್ ನಲ್ಲಿ‌ ಬಹು ಬ್ರಾಂಡ್ ಗಳ ಮೊಬೈಲ್ ಪೋನ್ ಮತ್ತು ಬಿಡಿಭಾಗಗಳನ್ನು ಒಂದೇ ಸೂರಿನಡಿ ಖರೀದಿಸಬಹುದು.

ಆ್ಯಪಲ್ ಮಾರ್ಟ್‌ನ ಮಳಿಗೆಗಳು ಈಗಾಗಲೇ ಮಂಗಳೂರಿನ ಅತ್ತಾವರ, ಕದ್ರಿ, ಪದವಿನಂಗಡಿ, ವೆಲೆನ್ಸಿಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News