ಒಲಿಂಪಿಕ್ಸ್: ಸಾನಿಯಾ-ಅಂಕಿತಾ ರೈನಾ ಸವಾಲು ಅಂತ್ಯ

Update: 2021-07-25 05:49 GMT
photo: twiiter/@India_AllSports

ಟೋಕಿಯೊ: ಸಾನಿಯಾ ಮಿರ್ಝಾ ಹಾಗೂ ಮೊದಲ ಬಾರಿ ಸ್ಪರ್ಧಿಸುತ್ತಿರುವ ಅಂಕಿತಾ ರೈನಾ ಟೋಕಿಯೊ ಒಲಿಂಪಿಕ್ಸ್ ನ ಮಹಿಳೆಯರ ಡಬಲ್ಸ್ ನ ಮೊದಲ ಸುತ್ತಿನಲ್ಲಿ ಸೋತು ಹೊರ ನಡೆದಿದ್ದಾರೆ.

ರವಿವಾರ ನಡೆದ ಪಂದ್ಯದಲ್ಲಿ ಹೆಚ್ಚಿನ ಸಮಯ ಪ್ರಾಬಲ್ಯ ಸಾಧಿಸಿದ ಸಾನಿಯಾ ಹಾಗೂ ಅಂಕಿತಾ ಜೋಡಿ  ವಿರುದ್ಧ ಉಕ್ರೇನ್ ನ ಅವಳಿ ಸಹೋದರಿಯರಾದ ನಾಡಿಯಾ ಮತ್ತು ಲಿಯುಡ್ಮಿಲಾ ಕಿಚೆನೋಕ್ ಅವರು ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡು 0-6, 7-6(0), 10-8 ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News