ಒಲಿಂಪಿಕ್ಸ್: ಭಾರತದ ಏಕೈಕ ಜಿಮ್ನಾಸ್ಟ್ ಪ್ರಣತಿ ನಾಯಕ್ ಫೈನಲ್ ತಲುಪಲು ವಿಫಲ

Update: 2021-07-25 07:20 GMT
photo: AFP

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಜಿಮ್ನಾಸ್ಟ್  ಪಟು ಪ್ರಣತಿ ನಾಯಕ್ ಕಲಾತ್ಮಕ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಆಲ್ ರೌಂಡ್ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.

ಪಶ್ಚಿಮ ಬಂಗಾಳದ 26 ರ ಹರೆಯದ ಪ್ರಣತಿ ಅರಿಯಾಕ್ ಜಿಮ್ನಾಸ್ಟಿಕ್ ಕೇಂದ್ರದಲ್ಲಿ ರವಿವಾರ ನಡೆದ ಫ್ಲೋರ್ ಎಕ್ಸಸೈಝ್, ವಾಲ್ಟ್, ಅನ್ ಈವನ್ ಬಾರ್ಸ್ ಮತ್ತು ಬ್ಯಾಲೆನ್ಸ್ ಬೀಮ್  ಎಂಬ ನಾಲ್ಕು ವಿಭಾಗಗಳಲ್ಲಿ ಒಟ್ಟು 42.565 ಅಂಕಗಳನ್ನು ದಾಖಲಿಸಿದ್ದಾರೆ.

ಅವರು ಈಗ ಸಬ್ ಡಿವಿಜನ್  2 ರ ಕೊನೆಯಲ್ಲಿ ಒಟ್ಟಾರೆ 29 ನೇ ಸ್ಥಾನದಲ್ಲಿದ್ದಾರೆ. ಒಟ್ಟು ಐದು ಉಪವಿಭಾಗಗಳಿವೆ, ಇದರಿಂದ ಅಗ್ರ 24 ಜಿಮ್ನಾಸ್ಟ್‌ಗಳು ಜುಲೈ 29 ರಂದು ನಡೆಯಲಿರುವ ಆಲ್-ಅರೌಂಡ್ ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿ ಅಗ್ರ ಎಂಟು ಜಿಮ್ನಾಸ್ಟ್‌ಗಳು ಆಗಸ್ಟ್ 1 ರಿಂದ 3 ರವರೆಗೆ ನಡೆಯಲಿರುವ ವೈಯಕ್ತಿಕ ಈವೆಂಟ್ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News