ನದಿ, ಜಲಮೂಲಗಳ ಸಂರಕ್ಷಣೆ ಸರಕಾರದ ಮೂಲಭೂತ ಕರ್ತವ್ಯ: ಕೇರಳ ಹೈಕೋರ್ಟ್

Update: 2021-07-25 14:38 GMT

ಕೊಚ್ಚಿ, ಜು.25: ನದಿಗಳು ಮತ್ತು ಇತರ ಜಲಮೂಲಗಳ ಸಂರಕ್ಷಣೆಯು ರಾಜ್ಯ ಸರಕಾರ ಮತ್ತು ಅವುಗಳನ್ನು ತಮ್ಮ ವ್ಯಾಪ್ತಿಯಲ್ಲಿ ಹೊಂದಿರುವ ಸ್ಥಳೀಯ ಸಂಸ್ಥೆಗಳ ಮೂಲಭೂತ ಕರ್ತವ್ಯವಾಗಿದೆ ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ.


ಮೀನಾಚಿಲ್ ನದಿನೀರಿನ ಶುದ್ಧತೆಯನ್ನು ಕಾಯ್ದುಕೊಳ್ಳಲು ಮತ್ತು ನದಿ ದಂಡೆಯಲ್ಲಿನ ಎಲ್ಲ ಅತಿಕ್ರಮಣಗಳನ್ನು ತೆರವುಗೊಳಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಕೇರಳ ಸರಕಾರ ಮತ್ತು ಕೊಟ್ಟಾಯಮ್ ನ ಮೂರು ನಗರಸಭೆಗಳಿಗೆ ನಿರ್ದೇಶ ನೀಡಿದ ಸಂದರ್ಭ ಮುಖ್ಯ ನ್ಯಾಯಾಧೀಶ ಎಸ್.ಮಣಿಕುಮಾರ ಮತ್ತು ನ್ಯಾ.ಶಾಜಿ ಪಿ.ಚಾಳಿ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ತಪಾಸಣೆ ನಡೆಸುವಂತೆ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯವು ರಾಜ್ಯ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶ ನೀಡಿತು. ಇದರೊಂದಿಗೆ ನದಿಯನ್ನು ಸುರಕ್ಷಿತವಾಗಿಸಲು ಮತ್ತು ಅಕ್ಕಪಕ್ಕದ ಜಮೀನುದಾರರಿಂದ ಅತಿಕ್ರಮಣದಿಂದ ರಕ್ಷಿಸಲು ಆಸಕ್ತರಾಗಿರುವುದಾಗಿ ಕೋರಿಕೊಂಡು ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ಅದು ವಿಲೇವಾರಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News