ಮಂಗಳೂರು : ಒಂಟಿ ಮಹಿಳೆಯಿದ್ದ ಕಾರಿನ ಟೈರ್ ಬದಲಿಸಿದ ಪೊಲೀಸರು

Update: 2021-07-25 16:24 GMT

ಮಂಗಳೂರು, ಜು.25: ಮಹಿಳೆ ಮತ್ತು ಮಗುವಿದ್ದ ಕಾರಿನ ಟೈರ್ ಪಂಕ್ಚರ್ ಆಗಿದ್ದು, ಅದನ್ನು ಗಮನಿಸಿದ ಮಂಗಳೂರು ದಕ್ಷಿಣ ಸಂಚಾರ (ನಾಗುರಿ) ಠಾಣೆ ಪೊಲೀಸರು ಬೇರೆ ಟೈರ್ ಅಳವಡಿಸಿ ಮಾನವೀಯತೆ ಮೆರೆದರು.

ರವಿವಾರ ಸಂಜೆ 7 ಗಂಟೆಯ ಸುಮಾರಿಗೆ ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಎಳೆಯ ಮಗುವಿನ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಪಂಪ್ವೆಲ್ ಸಮೀಪ ಟೈರ್ ಪಂಕ್ಚರ್ ಆಗಿತ್ತು. ಇದೇ ಸಂದರ್ಭ ಹೈವೇ ಪ್ಯಾಟ್ರಲ್ ಸ್ಥಳದಲ್ಲಿದ್ದು, ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟೈರ್‌ನ್ನು ಬದಲಿಸಿ ಮಾನವೀಯತೆ ಮೆರೆದರು.

ಈ ಸಂದರ್ಭ ಸಂಚಾರ ಠಾಣೆ ಎಎಸ್‌ಐ ಅಲ್ಬರ್ಟ್ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾರ್ಡ್ ಆಸೀಫ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News