ಮೂಳೂರು : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

Update: 2021-07-25 16:37 GMT

ಕಾಪು : ಮೂಳೂರಿನ ಮೂರು ಮನೆಗಳಿಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ನಗ - ನಗದು ಕಳವುಗೈದಿದ್ದಾರೆ.

ಮೂಳೂರು ಈಸ್ಟ್ ವೆಸ್ಟ್ ನರ್ಸರಿ ಬಳಿಯ ಮಹಮ್ಮದ್ ರಫೀಕ್, ಸೊಸೈಟಿ ಹಿಂಬದಿಯ ಮಧುರಾ ಕಾಂಪೌಂಡ್‌ನ ಇಬ್ರಾಹಿಂ ಮೊಹಮ್ಮದ್ ಹಸನ್ ಮತ್ತು ಶಹನಾಝ್ ಎಂಬವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಸುಮಾರು 6.70 ಲಕ್ಷ ರೂ. ಮೌಲ್ಯದ ನಗ - ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಮೂಳೂರು ಈಸ್ಟ್‌ವೆಸ್ಟ್ ನರ್ಸರಿ ಹಿಂಭಾಗದ ಮೊಹಮ್ಮದ್ ರಫೀಕ್ ಮನೆಗೆ ನುಗ್ಗಿ 20 ಪವನ್ ಚಿನ್ನಾಭರಣ ಮತ್ತು 20 ಸಾವಿರ ರೂ. ನಗದು ಸೇರಿ 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.

ಮಧುರಾ ಕಂಪೌಂಡ್‌ನ ಶಹನಾಝ್ ಅವರ ಮನೆಗೆ ನುಗ್ಗಿ 30 ಸಾವಿರ ರೂ. ಮೌಲ್ಯದ ಚಿನ್ನಾಭರಣ ಮತ್ತು 30 ಸಾವಿರ ರೂ. ನಗದು ಹಾಗೂ ಇಬ್ರಾಹಿಂ ಮೊಹಮ್ಮದ್ ಹಸನ್ ಅವರ ಮನೆಯಿಂದ 60 ಸಾವಿರ ರೂ. ಮೌಲ್ಯದ ರ್ರ್ಯಾಡೋ ವಾಚ್, 30 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಮತ್ತು 20 ಸಾವಿರ ರೂ. ಕಳವುಗೈಯ್ಯಲಾಗಿದೆ ಎಂದು ವರದಿಯಾಗಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News