ಮಂಗಳೂರು: ಗುಡ್ಡ ಕುಸಿದು ಮನೆಗೆ ಹಾನಿ, ಮಹಿಳೆಗೆ ಗಾಯ

Update: 2021-07-26 03:38 GMT

ಮಂಗಳೂರು : ತಾಲೂಕಿನ ಮಲ್ಲೂರು ಜಂಕ್ಷನ್ ಬಳಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ. ಘಟನೆಯಿಂದ ಬೀಪಾತುಮ್ಮ (72) ಎಂಬವರು ಗಾಯಗೊಂಡಿದ್ದಾರೆ.

ಕರಾವಳಿಯಲ್ಲಿ ಭಾಗದಲ್ಲಿ ಮಳೆಯಿಂದ ಸೋಮವಾರ ಬೆಳಗ್ಗೆ 5.30ರ ವೇಳೆಗೆ ಮಲ್ಲೂರು ಜಂಕ್ಷನ್  ಸಮೀಪ ಝುಬೈರ್ ಎಂಬವರ ಮನೆಯ ಹಿಂಭಾಗವಿದ್ದ ಗುಡ್ಡ ಕುಸಿದು ಬಿದ್ದಿದೆ. ಇದರಿಂದ ಮನೆಯ ಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದ ಬೀಪಾತುಮ್ಮ ಅವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News