ಪುತ್ತೂರು: ಚೆಲ್ಯಡ್ಕ ಸೇತುವೆ ಮೂರನೇ ಬಾರಿ ಮುಳುಗಡೆ

Update: 2021-07-26 10:56 GMT

ಪುತ್ತೂರು: ಕಳೆದ ಕೆಲ ದಿನಗಳಿಂದ ಸುರಿದ ಬಾರೀ ಮಳೆಯಿಂದಾಗಿ ಪುತ್ತೂರು-ಪಾಣಾಜೆ ರಸ್ತೆಯಲ್ಲಿರುವ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆ ಸೋಮವಾರ ಮೂರನೇ ಬಾರಿಗೆ ಮುಳುಗಡೆಯಾಗಿದೆ.

ರವಿವಾರ ರಾತ್ರಿ ಸುರಿದ ನಿರಂತರ ಮಳೆಯ ಪರಿಣಾಮ ಸೇತುವೆ ಮುಳುಗಡೆಗೊಂಡಿವೆ. ಈ ರಸ್ತೆಯಲ್ಲಿ ತೆರಳುವ ಖಾಸಗಿ ಬಸ್‍ಗಳು ಮತ್ತು ವಾಹನಗಳು ಸಂಟ್ಯಾರ್ ಮೂಲಕ ಬೆಟ್ಟಂಪಾಡಿ-ಪಾಣಾಜೆ ಕಡೆಗೆ ಸಂಚರಿಸಿದವು.  ಚೆಲ್ಯಡ್ಕ ಮುಳುಗು ಸೇತುವೆಯು ಈ ಬಾರಿ 15 ದಿನಗಳಲ್ಲಿ ಮೂರು ಬಾರಿ ಮುಳುಗಡೆಯಾಗಿದೆ. ಸೇತುವೆಯ ಅಡಿ ಭಾಗದಲ್ಲಿ ಹೂಳು ತುಂಬಿಕೊಂಡಿರುವುದು ಕೂಡಾ ಇದಕ್ಕೆ ಒಂದು ಕಾರಣವಾಗಿದೆ. ಮುಂದಿನ ವರ್ಷ ಚೆಲ್ಯಡ್ಕದಲ್ಲಿ ಸರ್ವ ಋತು ಸೇತುವೆ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ.

ಪುತ್ತೂರು ತಾಲೂಕಿನ ನೆರೆಭಾದಿತ ಪಟ್ಟಣ ಉಪ್ಪಿನಂಗಡಿಯಲ್ಲಿ ಕುಮಾರಾಧಾರ ಮತ್ತು ನೇತ್ರಾವತಿ ನದಿಗಳ ನೀರಿನ ಮಟ್ಟ ಸೋಮವಾರ 23ಮೀ.ಗಳಿಗೆ ಏರಿಕೆಯಾಗಿದೆ. ಇಲ್ಲಿ ಅಪಾಯದ ಮಟ್ಟ 30ಮೀ. ಆಗಿರುತ್ತದೆ. ವರ್ಷ ಕಳೆದಂತೆ ನೀರಿನ ಹೊರೆಯಿಂದ ನದಿಗಳು ಅಗಲ ಗೊಳ್ಳುತ್ತಿವೆ. ಆದ ಕಾರಣ ಇಲ್ಲಿ ಈ ಹಿಂದೆ ಇದ್ದ ಅಪಾಯದ ಮಟ್ಟ 26.5ಮೀ.ನಿಂದ 30 ಮೀ.ಗೆ ಏರಿಕೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News