ಯೆನೆಪೋಯ ಕ್ಯಾಂಪಸ್ ನಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಚಾಲನೆ

Update: 2021-07-26 11:09 GMT

ಕೊಣಾಜೆ: ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯವು, ಇಂಡಿಯೇಂಟ್ ಮೊಬಿಲಿಟಿ ವೆಂಚರ್ಸ್ ಸಂಸ್ಥೆಯ ಸಹಕಾರದೊಂದಿಗೆ  ಕ್ಯಾಂಪಸ್ಸಿನ ಒಳಗಡೆ ಸಂಚರಿಸಲು ಎರಡು ಇಲೆಕ್ಟ್ರಿಕ್ ಬಗ್ಗೀಸ್, ಎರಡು ಕಾರುಗಳು, 10  ಸೈಕಲ್  ಮತ್ತು 25 ಇಲೆಕ್ಟ್ರಿಕ್ ಸ್ಕೂಟರ್  ಮೊದಲಾದ ಪರಿಸರ ಸ್ನೇಹಿ ವಾಹನಗಳಿಗೆ ಯೆ‌ನಪೋಯ ವಿವಿಯ ಉಪಕುಲಪತಿ  ಡಾ.ಎಂ.ವಿಜಯ್‍ ಕುಮಾರ್ ಚಾಲನೆ ನೀಡಿದರು. 

ಕಾರ್ಯಕ್ರಮದಲ್ಲಿ ಇಂಡಿಯೇಂಟ್ ವೆಂಚರ್ಸ್ ಸಂಸ್ಥೆ  ಮುಖ್ಯಸ್ಥ ಡಾ. ಆರನ್ ರುಬೇನ್ ಡಿಸೋಜ,   ಸಹ ಕುಲಪತಿ ಡಾ.ಶ್ರೀಪತಿ ರಾವ್,  ಕಣ್ಣೂರು, ಕ್ಯಾಲಿಕಟ್ ವಿಶ್ವವಿದ್ಯಾನಿಲಯಗಳ ವಿಶ್ರಾಂತ   ಕುಲಪತಿ ಪ್ರೊ. ಅಬ್ದುಲ್ ರಹಿಮಾನ್,  ಯೆನೆಪೋಯ ವಿ.ವಿ ಕುಲ ಸಚಿವ ಡಾ.ಗಂಗಾಧರ ಸೋಮಯಾಜಿ, ಆರ್ಥಿಕ ವಿಭಾಗ ಅಧಿಕಾರಿ ಮೊಹಮ್ಮದ್ ಬಾವ, ಪರೀಕ್ಷಾಂಗ ಅಧಿಕಾರಿ ಡಾ.ನಂದೀಶ್,  ಯೆನೆಪೋಯ ದಂತ ಕಾಲೇಜಿನ  ಡೀನ್ ಡಾ.ಅಖ್ತರ್ ಹುಸೈನ್, ಯೆನೆಪೋಯ  ಫಾರ್ಮಸಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ.ಮೊಹಮ್ಮದ್ ಗುಲ್ಝರ್ ಅಹಮ್ಮದ್,   ಮುಖ್ಯಸ್ಥರುಗಳಾದ ವರುಣ್ ಬಂಗೇರ,  ಸೇಲ್ಸ್ ಪ್ರಬಂಧಕ ಇಸ್ರಾರ್ ಪಾಷಾ ಮತ್ತು ಸುಜೀಶ್  ಮುಂತಾದವರು ಉಪಸ್ಥಿತರಿದ್ದರು.

ವಿಶ್ವವಿದ್ಯಾಲಯದ  ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನಗಳನ್ನು ಉಪಯೋಗಿಸಲು ಅನುಮತಿ ನೀಡಲಾಗಿದ್ದು, ವಾಹನಗಳ ಚಾರ್ಜ್ ಪಾಯಿಂಟ್ ಕ್ಯಾಂಪಸ್ ಒಳಗಡೆ ಕಾರ್ಯಾಚರಿಸಲಿದ್ದು, ವಿದ್ಯಾರ್ಥಿಗಳನ್ನು  ಕ್ಯಾಂಪಸ್ಸಿನ ಒಳಗಡೆ ಸುತ್ತಾಡಲು  ಪಿಕಪ್ ಮತ್ತು  ಡ್ರಾಪಿಂಗ್ ಪಾಯಿಂಟ್ ಅನ್ನು ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News