ಒಲಿಂಪಿಕ್ಸ್ ವೇಟ್‍ಲಿಫ್ಟಿಂಗ್: ಬೆಳ್ಳಿ ಪದಕ ಗೆದ್ದ ಭಾರತದ ಮೀರಾಬಾಯಿ ಚಿನ್ನದ ಪದಕ ವಿಜೇತೆಯಾಗುವ ಸಾಧ್ಯತೆ

Update: 2021-07-26 16:41 GMT

ಹೊಸದಿಲ್ಲಿ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಶನಿವಾರ ಚಿನ್ನ ಗೆದ್ದ ಚೀನಾದ ವೇಟ್‍ಲಿಫ್ಟರ್ ಝಿಹುಯಿ ಹೌ ಅವರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಲಾಗುವುದೆಂಬ ಮಾಹಿತಿಯಿದೆ. ಅವರು ಈ ಪರೀಕ್ಷೆಯಲ್ಲಿ ವಿಫಲರಾಗಿದ್ದೇ ಆದಲ್ಲಿ  ಬೆಳ್ಳಿ ಗೆದ್ದಿದ್ದ ಭಾರತದ ಮೀರಾಬಾಯಿ ಚಾನು ಅವರಿಗೆ ಒಲಿಂಪಿಕ್ಸ್ ಚಿನ್ನ ದಕ್ಕಲಿದೆ.

ಶನಿವಾರ ನಡೆದ ಭಾರ ಎತ್ತುವ  ಸ್ಪರ್ಧೆಯಲ್ಲಿ ಝಿಝಯಿ ಅವರು 49 ಕೆಜಿ ವಿಭಾಗದಲ್ಲಿ ಒಟ್ಟು 210 ಕೆಜಿ ಭಾರ ಎತ್ತಿ ಹೊಸ ಒಲಿಂಪಿಕ್ ದಾಖಲೆ ಸೃಷ್ಟಿಸಿದ್ದರು. ಭಾರತದ ಮೀರಾಭಾಯಿ ಅವರು ಒಟ್ಟು 202 ಕೆಜಿ ಭಾರ (87 ಕೆಜಿ ಸ್ನ್ಯಾಚ್ ಮತ್ತು 115 ಕೆಜಿ ಕ್ಲೀನ್ ಎಂಡ್ ಜರ್ಕ್) ಎತ್ತುವ ಮೂಲಕ ಬೆಳ್ಳಿಗೆ ಸಂತೃಪ್ತಿ ಪಟ್ಟುಕೊಳ್ಳುವಂತಾಗಿತ್ತು. ಕಂಚಿನ ಪದಕ ಇಂಡೊನೇಷ್ಯಾದ ಕಂತಿಕಾ ಐಸಾ ಅವರ ಪಾಲಿಗೆ ಒಲಿದಿತ್ತು.

ಬೆಳ್ಳಿ ಗೆದ್ದ ಪ್ರಥಮ ಭಾರತೀಯ ವೇಟ್‍ಲಿಫ್ಟರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರೂ ಇದೀಗ ಚೀನಾದ ಝಿಝುಯಿ ಅವರು ಡ್ರಗ್ಸ್ ಪರೀಕ್ಷೆಗೊಳಗಾಗುವುದರಿಂದ ಅವರು ಪರೀಕ್ಷೆಯಲ್ಲಿ ವಿಫಲರಾದರೆ ಚಿನ್ನ ಮೀರಾಭಾಯಿ ಅವರ ಪಾಲಿಗೆ ಖಂಡಿತ ಒಲಿಯಲಿದೆ.

ಈ ಹಿಂದೆ 2009 ಸಿಡ್ನಿ ಒಲಿಂಪಿಕ್ಸ್ ನಲ್ಲಿ ಭಾರತದ ಕರ್ಣಂ ಮಲ್ಲೇಶ್ವರಿ ಅವರು 69 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News