ಅಫ್ಘಾನ್ ನಲ್ಲಿ ಅಧಿಕ ನಾಗರಿಕ ಸಾವು-ನೋವುಗಳು: ವಿಶ್ವಸಂಸ್ಥೆ ಎಚ್ಚರಿಕೆ

Update: 2021-07-26 13:29 GMT

ಕಾಬೂಲ್, ಜು. 26: ಅಫ್ಘಾನಿಸ್ತಾನದಾದ್ಯಂತ ತಾಲಿಬಾನ್ ನಡೆಸುತ್ತಿರುವ ಆಕ್ರಮಣಗಳು ನಿಲ್ಲದಿದ್ದರೆ ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿನ ಅತ್ಯಧಿಕ ನಾಗರಿಕರ ಸಾವುಗಳು ಸಂಭವಿಸಬಹುದು ಎಂದು ವಿಶ್ವಸಂಸ್ಥೆ ಸೋಮವಾರ ಎಚ್ಚರಿಸಿದೆ.

ಅಮೆರಿಕ ನೇತೃತ್ವದ ವಿದೇಶಿ ಪಡೆಗಳು ಅಫ್ಘಾನಿಸ್ತಾನದಿಂದ ಪೂರ್ಣ ಪ್ರಮಾಣದ ವಾಪಸಾತಿಗಾಗಿ ಸಿದ್ಧತೆಗಳನ್ನು ನಡೆಸಲು ಆರಂಭಿಸುತ್ತಿದ್ದಂತೆಯೇ, ಮೇ ತಿಂಗಳಿನಿಂದ ದೇಶಾದ್ಯಂತ ತಾಲಿಬಾನ್ ಉಗ್ರರ ಆಕ್ರಮಣದಲ್ಲಿ ಹೆಚ್ಚಳವಾಗಿದೆ.

ಅಫ್ಘಾನಿಸ್ತಾನದಲ್ಲಿ ನಡೆಯುವ ಸಂಘರ್ಷದಲ್ಲಿ ಪ್ರಾಣ ಕಳೆದುಕೊಳ್ಳುವ ನಾಗರಿಕರ ಸಂಖ್ಯೆಯನ್ನು ದಾಖಲೀಕರಣ ಒಂದು ದಶಕದ ಹಿಂದೆ ಆರಂಭಗೊಂಡಿದೆ.
2021ರ ಮೊದಲಾರ್ಧದಲ್ಲಿ ಪ್ರಾಣ ಕಳೆದುಕೊಂಡ ನಾಗರಿಕರ ಸಂಖ್ಯೆಯನ್ನು ಸೋಮವಾರ ಬಿಡುಗಡೆ ಮಾಡಿದ ಅಫ್ಘನಿಸ್ತಾನದಲ್ಲಿರುವ ವಿಶ್ವಸಂಸ್ಥೆ ಕಚೇರಿಯು, ಈ ವರ್ಷ ಈ ಸಂಖ್ಯೆಯು ಗರಿಷ್ಠ ಮಟ್ಟಕ್ಕೆ ತಲುಪಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿದೆ.

ಮೊದಲಾರ್ಧದಲ್ಲಿ ಸುಮಾರು 1,659 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 3,254 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News