ಅಮೆರಿಕದಿಂದ ಭ್ರಾಮಕ ಶತ್ರುವೊಂದರ ಸೃಷ್ಟಿ: ಉನ್ನತ ಮಟ್ಟದ ಮಾತುಕತೆಯಲ್ಲಿ ಚೀನಾ ಆರೋಪ

Update: 2021-07-26 13:34 GMT
photo : PTI

ಬೀಜಿಂಗ್, ಜು. 26: ಅಮೆರಿಕ ಮತ್ತು ಚೀನಾ ದೇಶಗಳ ನಡುವೆ ಸೋಮವಾರ ಚೀನಾದಲ್ಲಿ ಉನ್ನತ ಮಟ್ಟದ ಮಾತುಕತೆಗಳು ನಡೆದಿವೆ. ಈ ಸಂದರ್ಭದಲ್ಲಿ ಚೀನಾದ ಉನ್ನತ ರಾಜತಾಂತ್ರಿಕರೊಬ್ಬರು ಅಮೆರಿಕವನ್ನು ತರಾಟೆಗೆ ತೆಗೆದುಕೊಂಡಿದ್ದು, ಆಂತರಿಕ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಹಾಗೂ ಚೀನಾವನ್ನು ಕುಗ್ಗಿಸುವುದಕ್ಕಾಗಿ ಅಮೆರಿಕವು ಭ್ರಾಮಕ ಶತ್ರುವೊಂದನ್ನು ಸೃಷ್ಟಿಸಿದೆ ಎಂದು ಆರೋಪಿಸಿದರು.

ಜಗತ್ತಿನ ಎರಡು ಬೃಹತ್ ಆರ್ಥಿಕ ಶಕ್ತಿಗಳ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿರುವಂತೆಯೇ, ಅಮೆರಿಕದ ಎರಡನೇ ಅತ್ಯುನ್ನತ ರಾಜತಾಂತ್ರಿಕರಾಗಿರುವ ಉಪ ವಿದೇಶ ಕಾರ್ಯದರ್ಶಿ ವೆಂಡಿ ಶರ್ಮನ್ ರವಿವಾರ ಮುಖಾಮುಖಿ ಮಾತುಕತೆಗಳಿಗಾಗಿ ಉತ್ತರದ ನಗರ ಟಿಯಾನ್ಜಿನ್ಗೆ ಆಗಮಿಸಿದ್ದಾರೆ.

ಚೀನಾವನ್ನು ಭ್ರಾಮಕ ಶತ್ರುವಾಗಿ ಬಿಂಬಿಸುವ ಮೂಲಕ ತನ್ನ ಆಂತರಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಅಮೆರಿಕ ಬಯಸಿದೆ ಎಂದು ಮಾತುಕತೆಯ ವೇಳೆ ಉಪ ವಿದೇಶ ಸಚಿವ ಕ್ಸೀ ಫೆಂಗ್ ಹೇಳಿರುವುದಾಗಿ ಚೀನಾದ ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

ಚೀನಾವನ್ನು ಹತ್ತಿಕ್ಕುವುದಕ್ಕಾಗಿ ಅಮೆರಿಕವು ತನ್ನ ಸರಕಾರ ಮತ್ತು ಸಮಾಜವನ್ನು ಸಿದ್ಧಪಡಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News