×
Ad

ಹಿರಿಯರೆಡೆಗೆ ನಮ್ಮ ನಡಿಗೆ: ಶಿಲ್ಪಿ ನಾರಾಯಣ ಆಚಾರ್ಯಗೆ ಗೌರವ

Update: 2021-07-26 19:11 IST

ಉಡುಪಿ, ಜು.26: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಪತ್ರಕರ್ತರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ಶಿಲ್ಪಿಉಡುಪಿ ಹೆರ್ಗದ ನಾರಾಯಣ ಆಚಾರ್ಯ ಅವರನ್ನು ಅವರ ನಿವಾಸದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಸನ್ಮಾನಿಸಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಗುಲಾಬಿ ನಾರಾಯಣ ಆಚಾರ್ಯ, ಉದ್ಯಮಿ ಫೆರಲಾಯ್ ಭಾಸ್ಕರ ಆಚಾರ್ಯ, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಪರ್ಕಳ ಸುಬ್ರಾಯ ಆಚಾರ್ಯ, ಕಲಾವಿದ ಪಿ.ಎನ್.ಆಚಾರ್ಯ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಪಂಚನಬೆಟ್ಟು, ಗೋಪಾಲಾಚಾರ್ಯ, ವೆಂಕಟ್ರಮಣ ಆಚಾರ್ಯ, ರಾಘವೇಂದ್ರ ಪ್ರಭು ಕರ್ವಾಲು, ನರಸಿಂಹ ಮೂರ್ತಿ ರಾವ್ ಉಪಸ್ಥಿತರಿದ್ದರು.

ಸಮಿತಿಯ ರಾಜ್ಯಾಧ್ಯಕ್ಷ ಶೇಖರ ಅಜೆಕಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕಾರ್ಯಕಾರಣಿ ಸದಸ್ಯ ಸಂತೋಷ ಜೈನ್ ಎಣ್ಣೆಹೊಳೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News