ದ.ಕ. ಜಿಲ್ಲೆ : ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಣೆ

Update: 2021-07-26 13:55 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು. 26: ಮಂಗಳೂರಿನ ದ.ಕ. ಕೆನರಾ ಬಸ್ ಮಾಲಕರ ಸಂಘ, ಉಡುಪಿಯ ಕರಾವಳಿ ಬಸ್ ಮಾಲಕರ ಸಂಘಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿ ಮೇರೆಗೆ ಪ್ರಾಧಿಕಾರವು ಜು. 26ರಿಂದ ಅನ್ವಯವಾಗುವಂತೆ ಖಾಸಗಿ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಿ ಜಾರಿಗೊಳಿಸಿದೆ.

ಟೋಲ್ ಪ್ಲಾಜಾ ದರದ ಧಾರಣೆಯ ಮೇರೆಗೆ ಸಾರ್ವಜನಿಕ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರಿಂದ ಪ್ರತೀ ಕಿ.ಮೀ.ಗೆ ಪ್ರತೀ ಪ್ರಯಾಣಿಕರಿಂದ ಕನಿಷ್ಠ ಮೊತ್ತ 00.04 ಪೈಸೆಯಂತೆ ತೆಗೆದುಕೊಳ್ಳುವಂತೆ ಬಸ್ ಮಾಲಕರಿಗೆ ನಿರ್ದೇಶನ ನೀಡಲಾಗಿದೆ.

ಸಿಟಿ ಬಸ್- ನಗರ: ಮೊದಲ ಸ್ಟೇಜ್‌ಗೆ (2 ಕಿ.ಮೀ.ವರೆಗೆ) ಕನಿಷ್ಠ 12 ರೂ. ಪರಿಷ್ಕೃತ ದರ ನಿಗದಿಪಡಿಸಲಾಗಿದೆ. ಕ್ರಮವಾಗಿ 15ರಿಂದ 30ರೂ.ವರೆಗೆ ಏರಿಕೆ ಮಾಡಲಾಗಿದೆ.

ಸಿಟಿ ಬಸ್: ಗ್ರಾಮಾಂತರ (25 ಕಿ.ಮೀ.ವರೆಗೆ): ಮೊದಲ ಸ್ಟೇಜ್‌ಗೆ (2 ಕಿ.ಮೀ.ವರೆಗೆ) ಕನಿಷ್ಠ 12 ರೂ. ದರ ನಿಗದಿಗೊಳಿಸಲಾಗಿದೆ. ಕ್ರಮವಾಗಿ 30 ರೂ. ಟಿಕೆಟ್ ದರ ಪಡೆಯಬಹುದು.

ಎಕ್ಸ್ ಪ್ರೆಸ್/ ಷಟಲ್ ಬಸ್ ದರ: ಮೊದಲ ಸ್ಟೇಜ್‌ಗೆ (6.50 ಕಿ.ಮೀ.ವರೆಗೆ) 11 ರೂ. ಟಿಕೆಟ್ ಪರಿಷ್ಕೃತ ದರ ನಿಗದಿಪಡಿಸಲಾಗಿದೆ. ಕೊನೆಯ ಹಾಗೂ 25ನೇ ಸ್ಟೇಜ್‌ಗೆ (156-162 ಕಿ.ಮೀ.) 190 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News