ಉಡುಪಿ: ಉದ್ಯಮಶೀಲತಾ ತಿಳುವಳಿಕೆ ಶಿಬಿರ

Update: 2021-07-26 14:49 GMT

ಉಡುಪಿ, ಜು.26: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಮಂಗಳೂರು, ಉಡುಪಿ ಜಿಲ್ಲೆ ಎಸ್.ಸಿ-ಎಸ್.ಟಿ ಕೈಗಾರಿಕೋದ್ಯಮಿಗಳ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪಡುಬಿದ್ರಿಯ ಸುಝ್ಲಿನ್ ಆರ್.ಆರ್. ಕಾಲನಿ ಸಭಾಭ ವನ ದಲ್ಲಿ ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಶಿಬಿರ ಈಚೆಗೆ ನಡೆಯಿತು.

ಶಿಬಿರದ ಅಧ್ಯಕ್ಷತೆ ವಹಿಸಿದ್ದ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಡಿ. ಬಾಳೇರಿ, ಸ್ವಂತ ಉದ್ಯಮವನ್ನು ಸ್ಥಾಪಿಸಲು ಅನುಸರಿಸಬೇಕಾದ ಕ್ರಮ, ಸರಕಾರದ ಸ್ವಂತ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರಗಳು, ಉದ್ಯಮ ನಿರ್ವಹಣೆ ಮಾಡುವ ವಿಧಾನ ಮುಂತಾದ ವಿಷಯಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.

ಸಿಡಾಕ್ ಉಡುಪಿಯ ತರಬೇತುದಾರ ಪ್ರಥ್ವಿರಾಜ್ ನಾಯಕ್, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ನಿರುದ್ಯೋಗ ನಿವಾರಣೆಗಾಗಿ ಹಮ್ಮಿ ಕೊಂಡಿರುವ ಧನಸಹಾಯ ಹಾಗೂ ಸಹಾಯಧನ ಯೋಜನೆಗಳನ್ನು ವಿವರಿಸಿ, ಉತ್ತಮ ಸಾಧಕರಾಗಿ ಉದ್ದಿಮೆಗಳನ್ನು ಬೆಳೆಸಿ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕೊಡುಗೆಯನ್ನು ನೀಡುವಂತೆ ಕರೆ ನೀಡಿದರು.

ಸಿಡಾಕ್‌ನ ಮಹಿಳಾ ಸಲಹೆಗಾರ್ತಿ ವಿದ್ಯಾ, ಎಸ್.ಸಿ-ಎಸ್.ಟಿ ಕೈಗಾರಿಕೋದ್ಯಮಿ ಗಳ ಸಂಘದ ಜಿಲ್ಲಾ ಅಧ್ಯಕ್ಷ ಉಮಾನಾಥ, ಯುಎನ್‌ಡಿಪಿ ದಕ್ಷಿಣಕನ್ನಡ ಹಾಗೂ ಉಡುಪಿ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಉಮೇಶ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಮಂಗಳೂರಿನ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಪಡುಬಿದ್ರಿ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ, ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್, ಪಲಿಮಾರು ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಅಬ್ಬೇಡಿ ಗ್ರಾಪಂ ಅಧ್ಯಕ್ಷ ನಿಯಾಝ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಿಡಾಕ್‌ನ ಮಹಿಳಾ ಸಲಹೆಗಾರ್ತಿ ಪ್ರವಿಷ್ಯ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಜಿಲ್ಲೆಯ ಸುಮಾರು 80 ವುಂದಿ ಅಭ್ಯರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News