ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆ ಇದೆ: ಡಾ.ಕೆ.ಪ್ರಶಾಂತ್ ಶೆಟ್ಟಿ

Update: 2021-07-26 14:52 GMT

ಉಡುಪಿ, ಜು.26: ಪ್ರತಿಯೊಬ್ಬರು ತಾವು ಮಾಡುವ ಸೇವೆಯಲ್ಲಿ ಸಾರ್ಥಕತೆ ಪಡೆದುಕೊಳ್ಳಬೇಕಾದರೆ, ಮಾಡುವ ಸೇವೆಯಲ್ಲಿ ನಿಸ್ವಾರ್ಥ ಮನೋಭಾವ ಹೊಂದಿರಬೇಕು ಎಂದು ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಹೇಳಿದ್ದಾರೆ.

ಸೋಮವಾರ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ನಡೆದ ಘಟಕಾಧಿಕಾರಿ ಗಳ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಪೊಲೀಸ್, ಜಿಲ್ಲಾಡಳಿತ ಹಾಗೂ ಸರಕಾರದ ಇತರ ಇಲಾಖೆಗಳಲ್ಲಿ, ಕಾನೂನು ಸುವ್ಯವಸ್ಥೆ, ಪ್ರಕೃತಿ ವಿಕೋಪ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಗೃಹ ರಕ್ಷಕರಲ್ಲಿಯೂ ಸ್ವಯಂ ಸೇವಾ ಹಾಗೂ ನಿಸ್ವಾರ್ಥ ಮನೋಭಾವಗಳು ಜಾಗೃತವಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್‌ರಾಜೇಶ್ ಕುಂದಾಪುರ, ಜಿಲ್ಲಾ ಉಪಕಮಾಂಡೆಂಟ್ ರಮೇಶ್, ಅಧಿಕಾರಿಗಳಾದ ಪ್ರಭಾಕರ ಸುವರ್ಣ ಕಾರ್ಕಳ, ಸ್ಟೀವನ್ ಪ್ರಕಾಶ್ ಬ್ರಹ್ಮಾವರ, ಕೆ. ಭಾಸ್ಕರ್ ಕುಂದಾಪುರ, ಕುಮಾರ ಉಡುಪಿ, ನವೀನ್ ಕುಮಾರ ಪಡುಬಿದ್ರಿ, ರಾಘವೇಂದ್ರ ಬೈಂದೂರು, ಶೇಖರ ಮಣಿಪಾಲ ಹಾಗೂ ಶ್ಯಾಮಲಾ ಎ ಉಪಸ್ಥಿತರಿದ್ದರು.

ಗೃಹ ರಕ್ಷಕ ದಳದ ಸೇವೆಯಲ್ಲಿ ಚಿನ್ನದ ಪದಕ ಪಡೆದುಕೊಂಡ ಡಾ.ಕೆ. ಪ್ರಶಾಂತ್ ಶೆಟ್ಟಿ ಹಾಗೂ ಕಾಪು ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್ ಇವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News