ಚೀನಾದ ಶಾಂಘೈಗೆ ಚಂಡಮಾರುತದ ಭೀತಿ: 3.60 ಲಕ್ಷ ಮಂದಿ ಸ್ಥಳಾಂತರ

Update: 2021-07-26 16:53 GMT
photo :twitter/@MizzimaNews

ಬೀಜಿಂಗ್, ಜು,26: ಚೀನಾದ ವಾಣಿಜ್ಯ ರಾಜಧಾನಿಗೆ ಶಾಂಘೈಗೆ ಚಂಡಮಾರುತದ ಭೀತಿ ಎದುರಾಗಿದ್ದು ಕರಾವಳಿ ಪ್ರದೇಶಗಳಿಂದ. 3.60 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆಯೆಂದು ಸ್ಥಳೀಯ ಮಾಧ್ಯಮಗಳು ರವಿವಾರ ವರದಿ ಮಾಡಿವೆ.

ಝೆಜಿಯಾಂಗ್ ಪ್ರಾಂತದ ಕರಾವಳಿಗೆ ಚಂಡಮಾರುತವು ರವಿವಾರ ಮಧ್ಯಾಹ್ನ ಅಪ್ಪಳಿಸಿದ್ದು ಹಾಗೂ ತಾಸಿಗೆ 6.2 ಮೈಲು ವೇಗದಲ್ಲಿ ವಾಯವ್ಯದಿಕ್ಕಿನಡೆಗೆ ಶಾಂಘೈ ಕರಾವಳಿಯತ್ತ ಧಾವಿಸುತ್ತಿದೆಯೆಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
   
ಚಂಡಮಾರುತದ ಜೊತೆ ಬೀಸುತ್ತಿರುವ ಭಾರೀ ಬಿರುಗಾಳಿಯಿಂದಾಗಿ ನೂರಾರು ಮರಗಳು ಧರೆಗುರುಳಿದ್ದು, ಹಲವಾರು ಮನೆಗಳು ಹಾನಿಗೀಡಾಗಿವೆ. ಮಳೆ ಕೂಡಾ ಧಾರಾಕಾರವಾಗಿ ಸುರಿಯುತ್ತಿದ್ದು ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆಯೆಂದು ಪರಿಹಾರ ಕಾರ್ಯಾಚರಣೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಚೀನಾದ ಪ್ರಮುಖ ನಗರವಾದ ಶಾಂಘೈನ ಎರಡು ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿ ಎಲ್ಲಾ ಪ್ರಯಾಣಿಕ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಸಬ್‌ವೇ ಹಾಗೂ ಹೈಸ್ಪೀಡ್ ರೈಲು ಸಂಚಾರವನ್ನು ಕೂಡಾ ಸೋಮವಾರ ಮಧ್ಯಾಹ್ನದವವರೆಗೆ ಸ್ಥಗಿತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News