ಕಾಪು: ಬ್ಲಡ್ ಹೆಲ್ಪ್ಕೇರ್ ಕರ್ನಾಟಕ ಮೂರನೇ ವಾರ್ಷಿಕೋತ್ಸವ

Update: 2021-07-27 18:02 GMT

ಕಾಪು, ಜು.27: ಬ್ಲಡ್ ಹೆಲ್ಪ್ಕೇರ್ ಕರ್ನಾಟಕ ಇದರ 3ನೆ ವಾರ್ಷಿಕೋತ್ಸವ ವನ್ನು ಕಾಪು ಕೋಟೆ ಮಲ್ಲಾರ್‌ನಲ್ಲಿರುವ ಹಝ್ರತ್ ಸಾದಾತ್ ವೃದ್ಧಾಶ್ರಮದ ವೃದ್ಧರಿಗೆ ಮತ್ತು ಹಿರಿಯರಿಗೆ ಊಟದ ವ್ಯವಸ್ಥೆ ಮತ್ತು ಹಣ್ಣು ಹಂಪಲು ವಿತರಿಸುವ ಮೂಲಕ ಸರಳ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಬ್ಲಡ್ ಹೆಲ್ಪ್ಕೇರ್ ಸಂಚಾಲಕ ಶಂಶುದ್ದೀನ್ ಬಳ್ಕುಂಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಆಪತ್ಭಾಂದವ ಈಶ್ವರ್ ಮಲ್ಪೆ ಮತ್ತು ಹಝ್ರತ್ ಸಾದಾತ್ ವೃದ್ಧಾಶ್ರಮದ ಸ್ಥಾಪಕ ಮುಹಮ್ಮದ್ ಶಾಫಿ ಮದಾರಿಯವನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನು ಬ್ಲಡ್ ಹೆಲ್ಪ್ಕೇರ್ ಕರ್ನಾಟಕ ಅಧ್ಯಕ್ಷ ನಝೀರ್ ಹುಸೈನ್ ವಹಿಸಿದ್ದರು. ಅಜ್ಮಲ್ ಅಸಾದಿ ಮದಾರಿ, ಬ್ಲಡ್ ಹೆಲ್ಪ್ಕೇರ್‌ನ ಮುಖ್ಯ ಸಲಹೆಗಾರ ಶೇಖ್ ಫಯಾಝ್ ಅಲಿ, ವೃದ್ಧಾಶ್ರಮದ ಅಧ್ಯಕ್ಷ ಜಾಫರ್ ಕಟಪಾಡಿ, ಅಭಿವೃದ್ಧಿ ಕಮಿಟಿಯ ಅಧ್ಯಕ್ಷ ನಾಸೀರ್, ಹೆಲ್ಪ್ಕೇರ್ನ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಲಾಯಿ, ಗೌರವಾಧ್ಯಕ್ಷ ಇಫ್ತಿಕಾರ್, ಜೊತೆ ಕಾರ್ಯದರ್ಶಿ ಬಶೀರ್, ಸಂವಹನ ಕಾರ್ಯದರ್ಶಿ ಬಾತೀಶ್ ತೆಕ್ಕಾರ್, ಶಿಬಿರದ ಉಸ್ತುವಾರಿ ಇಂತಿ ಯಾಝ್ ಬಜ್ಪೆ, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫ ಕೆ.ಸಿ.ರೋಡ್, ಮುಖ್ಯ ಕಾರ್ಯ ನಿರ್ವಾಹಕ ರಾದ ಖಾದರ್ ಮುಂಚೂರು, ಶಹಜಾನ್ ಮುಕ್ಕ, ರಾಫೀಝ್ ಕೃಷ್ಣಾಪುರ, ಸಿರಾಜ್ ಉಳಾಯಿ ಬೆಟ್ಟು, ನಿಹಾನ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

ಬ್ಲಡ್ ಹೆಲ್ಪ್ಕೇರ್ ಕಾರ್ಯನಿರ್ವಾಹಕ ಅಬ್ದುಲ್ ಹಮೀದ್ ಗೊಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸತ್ತಾರ್ ಪುತ್ತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News